ಬಾಲಿವುಡ್‌ನಲ್ಲಿ ಸ್ತ್ರೀ-2 ಚಿತ್ರದ ಅಬ್ಬರ ಜಾಸ್ತಿ ಇದೆ. ಕೇವಲ 34 ದಿನಗಳಲ್ಲಿಯೇ ಈ ಚಿತ್ರದ ಭಾರೀ ಕಲೆಕ್ಷನ್ ಮಾಡಿತ್ತು. ಸ್ತ್ರೀ-2 ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್, ಶೃದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಈ ಚಿತ್ರದ ಕಂಟೆಂಟ್ ಹೆಚ್ಚು ಸದ್ದು ಮಾಡಿತ್ತು. ಸ್ತ್ರೀ ಪಾರ್ಟ್-1 ಚಿತ್ರದ ಸೌಂಡ್ ಅಷ್ಟೇನೂ ಇರಲಿಲ್ಲ. ಆದರೆ, ಸ್ತ್ರೀ-2 ಸಿನಿಮಾ ದಾಖಲೆ ಮಾಡಿ ಮುನ್ನುಗ್ಗಿತ್ತು. ಈ ಸಿನಿಮಾ 801 ಕೋಟಿ ರೂ. ಒಟ್ಟಾರೆ ಬಿಜಿನೆಸ್ ಮಾಡಿದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಈಗ ಇದೇ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ.ಈ ಹಾರರ್ ಕಾಮಿಡಿ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಿ ಹೊಸ ದಾಖಲೆ ಬರೆದಿತ್ತು. ನಿರ್ದೇಶಕ ಅಮರ್ ಕೌಶಿಕ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿತ್ತು.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ತ್ರೀ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪ್ರಸ್ತುತ ಈ ಸಿನಿಮಾವನ್ನು ಬಾಡಿಗೆ ಆಧಾರದ ಮೇಲೆ ವೀಕ್ಷಿಸಬಹುದು. ಬರೋಬ್ಬರಿ 349 ರೂಪಾಯಿ ಪೇ ಮಾಡಿ ಈ ಸಿನಿಮಾವನ್ನು ನೋಡಬಹುದಾಗಿದೆ.
ಒಂದಷ್ಟು ದಿನಗಳ ಬಳಿಕ ಈ ಸಿನಿಮಾ ಎಲ್ಲ ಪ್ರೈಂ ಸದಸ್ಯರಿಗೆ ವೀಕ್ಷಣೆಗೆ ಸಿಗಲಿದೆ. ಚಿತ್ರಮಂದಿರದಲ್ಲಿ ಕೋಟಿ ಕೋಟಿ ಬಾಚಿಕೊಂಡ ಈ ಸಿನಿಮಾ, ಈಗ ಒಟಿಟಿಯಲ್ಲಿಯೂ ರೆಂಟ್ ಮೂಲಕ ಹಣ ಗಳಿಕೆಗೆ ಮುಂದಾಗಿದೆ. ಸ್ತ್ರೀ-2 ಸಿನಿಮಾದ ಮೊದಲ ಬಾಗ ಇಷ್ಟು ಸೌಂಡ್ ಮಾಡಿರಲಿಲ್ಲ. 2018 ರಲ್ಲಿ ಬಂದು ಹೋದ ಈ ಚಿತ್ರದಲ್ಲೂ ರಾಜ್‌ಕುಮಾರ್ ರಾವ್ ಇದ್ದರು. ಶೃದ್ಧಾ ಕಪೂರ್ ರೋಲ್ ಇಲ್ಲೂ ಇತ್ತು. ಇದೇ ಕಲಾವಿದರೇ ಸ್ತ್ರೀ-2 ಸಿನಿಮಾದಲ್ಲಿ ಕಮಾಲ್ ಮಾಡಿದ್ದಾರೆ.