ಪ್ರಸ್ತುತ ತಮಿಳು, ತೆಲುಗಿನಲ್ಲಿ ಬಿಗ್ ಬಾಸ್ ತಂಡ ತನ್ನ 8ನೇ ಸೀಸನ್‌ನೊಂದಿಗೆ ಮತ್ತೆ ಬರುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಡೆಸುತ್ತಿದ್ದಾರೆ, ಕನ್ನಡದಲ್ಲಿ ಎಂದಿನಂತೆ ಕಿಚ್ಚ ಸುದೀಪ್ ನಡೆಸಿಕೊಡುತ್ತಾರೆ. ಕಿಚ್ಚ ಸುದೀಪ್ ಹೊರತು ಬೇರೆ ಯಾರೇ ನಡೆಸಿಕೊಟ್ಟರೂ ಸಪ್ಪೆ ಅನಿಸಿಬಿಡುವಷ್ಟು ಜನರು ಕಿಚ್ಚ ಸುದೀಪ್ ಕನ್ನಡ ರಿಯಾಲಿಟಿ ಶೋದ ಬಿಗ್ ಬಾಸ್ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗರ್ಜುನ್ ನಡೆಸಿಕೊಡುತ್ತಾರೆ. ಈಗಾಗಲೇ ತೆಲುಗು ಬಿಗ್ ರಿಯಾಲಿಟಿ ಶೋ 8ನೇ ಸೀಸನ್ ಕೂಡ ನಾಗರ್ಜುನ ನಡೆಸಿಕೊಡಲಿದ್ದಾರೆ. ಆದರೆ ಇದೀಗ ತಮಿಳಿನಲ್ಲಿ ಹೊಸ ಅಪ್ಡೇಟ್ ಬಂದಿದ್ದು, ರಿಯಾಲಿಟಿ ಶೋ ಪ್ರೇಕ್ಷಕರಿಗೆ ಕಮಲ್ ಹಾಸನ್ ಶಾಕಿಂಗ್ ಸುದ್ದಿ ನೀಡಿದ್ದಾರೆ. ಇಲ್ಲಿವರೆಗೆ ಅಂದರೆ ಏಳು ಸೀಸನ್‌ವರೆಗೆ ಬಿಗ್ ರಿಯಾಲಿಟಿ ಶೋ ಉತ್ತಮವಾಗಿ ನಡೆಸಿಕೊಟ್ಟಿದ್ದ ನಟ ಕಮಲ್ ಹಾಸನ್ ಇದೀಗ 8ನೇ ಸೀಸನ್ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ.
ಈಗಾಗಲೇ ತೆಲುಗು ಸೀಸನ್‌ನ ಅಪ್‌ಡೇಟ್‌ಗಳು ಬಂದಿವೆ. ಕಿಂಗ್ ನಾಗ್ ಹೋಸ್ಟ್ ಆಗಿ ಎಂಟನೇ ಸೀಸನ್ ಅನ್ನು ಮುನ್ನಡೆಸಲಿದ್ದಾರೆ. ಆದರೆ ತಮಿಳಿನ ಬಿಗ್ ಬಾಸ್ ಶೋನಲ್ಲಿ ಬದಲಾವಣೆ ಅಗತ್ಯ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ಕಮಲ್ ಹಾಸನ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ಉತ್ತಮ ಯಶಸ್ಸಿನೊಂದಿಗೆ ಮುನ್ನಡೆಸಿದ್ದಾರೆ. ಅವರು ಏಳು ಸೀಸನ್‌ಗಳಿಗೆ ಬಿಗ್ ಬಾಸ್‌ನ ನಿರೂಪಕರಾಗಿದ್ದರು. ಆದರೆ ಇದೀಗ ಕಮಲ್ ಹಾಸನ್ ಬಿಗ್ ಬಾಸ್ ಶೋಗೆ ಬಂದಿದ್ದಾರೆ. ಈ ಸೀಸನ್‌ಗೆ ಹೋಸ್ಟ್ ಮಾಡುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಈ ಬಗ್ಗೆ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಮಲ್ ಹಾಸನ್, ಬಿಗ್ ಬಾಸ್ ರಿಯಾಲಿಟಿ ಶೋದಿಂದ ಹೊರನಡೆದಿರುವ ಬಗ್ಗೆ ಬರೆದುಕಕೊಂಡಿದ್ದಾರೆ. ಹೊರನಡೆದಿರುವ ಬಗ್ಗೆ ಕಾರಣವನ್ನೂ ಸಹ ನೀಡಿದ್ದಾರೆ.