Ad

ಶಾರುಖ್ ಖಾನ್‌ಗೆ ಪರ್ಡೋ ಅಲ್ಲಾ ಕ್ಯಾರೀರಾ ಪ್ರಶಸ್ತಿಯ ಗರಿ

Skr

ಸ್ವಿಜರ್ಲೆಂಡ್‌: ಇಲ್ಲಿ ನಡೆದ 77 ನೇ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಐಕಾನ್ ಶಾರುಖ್ ಖಾನ್ ಅವರಿಗೆ ಪರ್ಡೋ ಅಲ್ಲಾ ಕ್ಯಾರೀರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಶಾರುಖ್‌, ತಮ್ಮ ಭಾಷಣದಿಂದ ಪ್ರೇಕ್ಷಕರನ್ನು ಮೋಡಿ ಮಾಡಿ, ಅವರ ಇಟಾಲಿಯನ್ ಅಭಿಮಾನಿಗಳನ್ನು ಬೆರಗುಗೊಳಿಸಿದರು. ಈ ಸಂಭ್ರಮದಲ್ಲಿ ಕಪ್ಪು ಟಕ್ಸೀಡೋದಲ್ಲಿ ಮಿಂಚಿದ ಶಾರುಖ್‌, ಹೃದಯಸ್ಪರ್ಶಿ ಭಾಷಣದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿ, ನನಗೆ ಇಂಥದ್ದೊಂದು ಸ್ವಾಗತ ನೀಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಭಾಷಣದ ವೇಳೆ ಅಭಿಮಾನಿಯೊಬ್ಬರು ಸಭೆಯಿಂದ ಐ ಲವ್ ಯೂ ಎಂದು ಕಿರುಚಿದಾಗ ಐ ಲವ್‌ಯು ಟೂ ಎಂದ ಶಾರುಖ್‌, ಪ್ರೀತಿಯಿಲ್ಲದ ಕಡೆ ಯಾವುದೇ ಸೃಜನಶೀಲತೆ ಸೃಷ್ಟಿಯಾಗದು. ಪ್ರೀತಿ ಎಲ್ಲಾ ಭಾಷೆಗಳನ್ನು ಮೀರಿದ ಮತ್ತು ಪ್ರಪಂಚದಾದ್ಯಂತದ ಪ್ರತಿಯೊಬ್ಬರೂ ಗ್ರಹಿಸುವ ಭಾಷೆಯಾಗಿದೆ ಎಂದರು.

Ad
Ad
Nk Channel Final 21 09 2023