Bengaluru 23°C
Ad

ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ ಸೋನಾಕ್ಷಿ ಸಿನ್ಹಾ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತನ್ನ ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ.

ಮುಂಬಯಿ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತನ್ನ ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಕಳೆದ ಕೆಲ ಸಮಯದಿಂದ ಸೋನಾಕ್ಷಿ ನಟ ಜಹೀರ್ ಇಕ್ಬಾಲ್ ಅವರೊಂದಿಗೆ ಪ್ರೀತಿಯ ಬಂಧದಲ್ಲಿದ್ದಾರೆ. ಜೊತೆಯಾಗಿ ಅನೇಕ ಸೋಶಿಯಲ್‌ ಪೋಸ್ಟ್‌ ಗಳನ್ನು ಇಬ್ಬರು ಹಂಚಿಕೊಂಡಿದ್ದಾರೆ. ಪಾರ್ಟಿಗಳಲ್ಲಿ ಭಾಗಿಯಾಗಿದ್ದರೂ ಎಲ್ಲೂ ಕೂಡ ತನ್ನ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಇತ್ತೀಚೆಗಷ್ಟೇ ಸೋನಾಕ್ಷಿ ಹುಟ್ಟುಹಬ್ಬಕ್ಕೆ ಜಹೀರ್‌ ಮುದ್ದಾದ ಫೋಟೋಗಳ್ಳುಳ ಪೋಸ್ಟ್‌ ಹಾಕಿ ಪ್ರಿಯತಮೆಗೆ ವಿಶ್‌ ಮಾಡಿದ್ದರು. ಇದೀಗ ಇಬ್ಬರು ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಜೂನ್‌.23 ರಂದು ಕೆಲವೇ ಕೆಲ ಸಂಬಂಧಿಕರು ಹಾಗೂ ಗೆಳೆಯರ ಸಮ್ಮುಖದಲ್ಲಿ ಸೋನಾಕ್ಷಿ – ಜಹೀರ್‌ ವಿವಾಹವಾಗಲಿದ್ದಾರೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.

Ad
Ad
Nk Channel Final 21 09 2023
Ad