ಮನರಂಜನೆ

ಮಡಿಕೇರಿಯಲ್ಲಿ ಸೋಮವಾರ ಸಂಜೆ ವಿಜೖಂಭಿಸಲಿದೆ ಶಿವದೂತ ಗುಳಿಗ

ಮಡಿಕೇರಿ: ನಾಟಕ ರಂಗದಲ್ಲಿ ಅಭೂತಪೂವ೯ ಯಶಸ್ಸು ಕಂಡ ಶಿವದೂತ ಗುಳಿಗ ನಾಟಕವು ಇದೇ ಏಪ್ರಿಲ್ 24 ರಂದು ಸೋಮವಾರ ಸಂಜೆ 7 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರದಶ೯ನಗೊಳ್ಳುತ್ತಿದೆ.

2020 ರ ಜನವರಿ 2 ರಂದು ಮೊದಲ ಪ್ರದಶ೯ನ ಕಂಡಿದ್ದ ಈ ನಾಟಕವು ಇದೀಗ 500 ನೇ ಪ್ರದಶ೯ನದತ್ತ ದಾಪುಗಾಲಿಟ್ಟಿದ್ದು ನಾಟಕ ರಂಗದಲ್ಲಿಯೇ ಹೊಸ ದಾಖಲೆಗೆ ಸೖಷ್ಟಿಸಿದೆ. ಈ ಮೂಲಕ ಚರಿತ್ರೆಯನ್ನೇ ಸೖಷ್ಟಿಸಿದೆ.

ಕಾಂತಾರ ಸಿನಿಮಾದಲ್ಲಿ ಗುರುವ ಪಾತ್ರ ಮಾಡಿ ಪ್ರೇಕ್ಷಕರ ಅಪಾರ ಮನ್ನಣೆ ಗಳಿಸಿದ್ದ ಸ್ವರಾಜ್ ಶೆಟ್ಟಿ ಈ ನಾಟಕದಲ್ಲಿ ಗುಳಿಗ ಪಾತ್ರವನ್ನು ನಿವ೯ಹಿಸುತ್ತಿದ್ದಾರೆ.

ಅನೇಕ ಜನಪ್ರಿಯ ತುಳು ಚಿತ್ರಗಳ ನಿದೇ೯ಶಕ ವಿಜಯ ಕುಮಾರ್ ಕೊಡಿಯಾಲಬೈಲ್ ನಿದೇ೯ಶನದಲ್ಲಿ ಸೖಷ್ಟಿಯಾದ ಶಿವದೂತ ಗುಳಿಗ ತುಳುನಾಡಿನ ಕಾರಣಿಕ ಶಕ್ತಿಯಾದ ಗುಳಿಗನ ಹುಟ್ಟು, ಜೀವನ, ಶಕ್ತಿಯ ನೆಲೆಯನ್ನು ರಂಗಭೂಮಿಯ ಪರಿಧಿಯಲ್ಲಿ ಪ್ರಸ್ತುತ ಪಡಿಸುತ್ತದೆ.

ಭಾರೀ ವೆಚ್ಚದಲ್ಲಿ ಸೖಷ್ಟಿಯಾದ ರಂಗವೇದಿಕೆ, ಗ್ರಾಫಿಕ್ ತಂತ್ರಜ್ಞಾನ,ಕೈಲಾಸ, ವೈಕುಂಠಗಳ ಸೆಟ್ಟಿಂಗ್, ಮಿಂಚು ಹರಿಸುಂಥ ಬೆಳಕಿನ ಚಿತ್ತಾರ, ಇವುಗಳೆಲ್ಲಾ ಶಿವದೂತ ಗುಳಿಗ ನಾಟಕದ ಹೈಲೈಟ್ಸ್.

ಒಂದು ಅದ್ಬುತ ನಾಟಕದ ಪ್ರದಶ೯ಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ಟಿಕೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ಮಾಹಿತಿಗಾಗಿ ಸಂಪಕ೯ – ವಿಕ್ರಂ ಜಾದೂಗಾರ್. 9448108222

Ashika S

Recent Posts

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

8 mins ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

19 mins ago

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

56 mins ago

ಎಸಿಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

1 hour ago

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

2 hours ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

2 hours ago