ಬೆಂಗಳೂರು: ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ವರಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ಸೆಟ್ಟೇರಿದೆ. ತಿಂಗಳ ಹಿಂದೆಯೇ ಸಿನಿಮಾಗ ಘೋಷಣೆ ಮಾಡಲಾಗಿತ್ತು, ಸಿನಿಮಾಕ್ಕೆ ಸಂಬಂಧಿಸಿದಂತೆ ಸಣ್ಣ ಟೀಸರ್ ಸಹ ಬಿಡುಗಡೆ ಮಾಡಲಾಗಿತ್ತು.
ಇದೀಗ ವರಲಕ್ಷ್ಮಿ ಹಬ್ಬದಂದು ಸಿನಿಮಾದ ಮುಹೂರ್ತ ಮುಗಿಸಿ ಅಧಿಕೃತವಾಗಿ ಸೆಟ್ಟೇರಿದೆ. ಇದು ಶಿವಣ್ಣ ನಟಿಸಲಿರುವ 131ನೇ ಸಿನಿಮಾ ಆಗಿರಲಿದ್ದು ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಆದರೆ ಇದೊಂದು ಪಕ್ಕಾ ಅಂಡರ್ವರ್ಲ್ಡ್ ಕುರಿತಾದ ಕತೆಯನ್ನು ಒಳಗೊಂಡಿರಲಿದೆ.
ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಕೆಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿನಿಮಾವನ್ನು ಕಾರ್ತಿಕ್ ಅದ್ವೈತ್ ನಿರ್ದೇಶನ ಮಾಡಲಿದ್ದಾರೆ. ಕಾರ್ತಿಕ್ ಅದ್ವೈತ್ ತಮಿಳು ಸಿನಿಮಾ ನಿರ್ದೇಶಕರಾಗಿದ್ದು ಮೊದಲ ಬಾರಿಗೆ ಕನ್ನಡದ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ಸಿನಿಮಾ ನಿರ್ದೇಶಿಸಲೆಂದೇ ಅವರು ತಮಿಳಿನಿಂದ ಕನ್ನಡಕ್ಕೆ ಬಂದಿದ್ದಾರೆ. ಸಿನಿಮಾವನ್ನು ಎಸ್ಎನ್ ರೆಡ್ಡಿ ಮತ್ತು ಸುಧೀರ್ ಪಿ ನಿರ್ಮಾಣ ಮಾಡಲಿದ್ದಾರೆ.