Bengaluru 25°C
Ad

ನಾಗಮಂಗಲದಲ್ಲಿ ನ.25 ರಿಂದ ಏಳು ದಿನಗಳ ನಾಟಕೋತ್ಸವ

ಜಿಲ್ಲೆಯ ನಾಗಮಂಗಲದ ಕನ್ನಡ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಆಚರಿಸುತ್ತಿದ್ದು ಬೆಳಕಿನ ಮಾಸದಲ್ಲಿ ನಾಟಕೋತ್ಸವ ರಂಗಸಜ್ಜಿಕೆಯು ಕನ್ನಡ ಸಂಘ ಆಯೋಜನೆ ಮಾಡಲಾಗುತ್ತಿದ್ದು, ನವಂಬರ್ 25 ರಿಂದ ಡಿಸೆಂಬರ್ 1ರವರೆಗೆ ನಾಗರಂಗ ನಾಟಕೋತ್ಸವ ನಡೆಯಲಿದ್ದು, ಬೆಂಗಳೂರು, ಮೈಸೂರು ಹಾಗೂ ಇತರ ಜಿಲ್ಲೆಗಳಲ್ಲಿ ಬೇರೆ ಬೇರೆ ಕಲಾತಂಡಗಳಿಂದ ನಾಟಕಗಳ ಪ್ರದರ್ಶನ ನಡೆಯಲಿದೆ.

ಮಂಡ್ಯ: ಜಿಲ್ಲೆಯ ನಾಗಮಂಗಲದ ಕನ್ನಡ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಆಚರಿಸುತ್ತಿದ್ದು ಬೆಳಕಿನ ಮಾಸದಲ್ಲಿ ನಾಟಕೋತ್ಸವ ರಂಗಸಜ್ಜಿಕೆಯು ಕನ್ನಡ ಸಂಘ ಆಯೋಜನೆ ಮಾಡಲಾಗುತ್ತಿದ್ದು, ನವಂಬರ್ 25 ರಿಂದ ಡಿಸೆಂಬರ್ 1ರವರೆಗೆ ನಾಗರಂಗ ನಾಟಕೋತ್ಸವ ನಡೆಯಲಿದ್ದು, ಬೆಂಗಳೂರು, ಮೈಸೂರು ಹಾಗೂ ಇತರ ಜಿಲ್ಲೆಗಳಲ್ಲಿ ಬೇರೆ ಬೇರೆ ಕಲಾತಂಡಗಳಿಂದ ನಾಟಕಗಳ ಪ್ರದರ್ಶನ ನಡೆಯಲಿದೆ.

Ad

ನಾಟಕೋತ್ಸವಕ್ಕೆ ನವಂಬರ್ 25 ರಿಂದ ವಿದ್ಯುಕ್ತ ಚಾಲನೆ ದೊರೆಯಲಿದ್ದು, ನಾಗಮಂಗಲದ ಸರ್ಕಾರಿ ಜೂನಿಯರ್ ಕಾಲೇಜು ಒಳಾಂಗಣದಲ್ಲಿ, ವೇದಿಕೆಯನ್ನು ಕನ್ನಡದ ಚಿತ್ರರಂಗದ ನಾಯಕ ನಟಿ ದಿವಂಗತ ಲೀಲಾವತಿಯವರ ಹೆಸರಿನ ವೇದಿಕೆಯ ಮುಖಾಂತರ, ಈ ನಾಟಕೋತ್ಸವ ಆರಂಭಗೊಳ್ಳಲಿದೆ.

Ad

ನಾಗಮಂಗಲ ತಾಲೂಕಿನ ಕಲೆಯ ತವರೂರಾಗಿ ಸಾಹಿತ್ಯ ಶೈಕ್ಷಣಿಕ ಧಾರ್ಮಿಕ ಕಲಾ ಸಾಂಸ್ಕೃತಿಕ ಕಲಾ ಪರಂಪರೆಯ ರಂಗಭೂಮಿಯ ಒಡಲಾಗಿರುವ ನಾಗಮಂಗಲ ರಾಜ್ಯ ರಾಷ್ಟ್ರಮಟ್ಟದಲ್ಲೂ ಕೀರ್ತಿಗಳಿಸಿದೆ. ಈ ನೆಲದಲ್ಲಿ ತನ್ನದೇ ಆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಇಲ್ಲಿ ಹಲವು ವರ್ಷಗಳಿಂದ ಕನ್ನಡ ಸಂಘದ ರಂಗ ಪರಂಪರೆಯು ನಾಟಕೋತ್ಸವದ ಹೆಜ್ಜೆ ಹಾಕುತಾ ಬರಲಾಗುತ್ತಿದೆ.

Ad

ತ

ಈ ಬಾರಿಯ ನಾಟಕೋತ್ಸವದಲ್ಲಿ ನ. 25 ನಂಗ್ಯಾಕೋ ಡೌಟು, ನ.26 ಪರಸಂಗದ ಗೆಂಡೆತಿಮ್ಮ , ನ.27 ಕಾಕದೋಷ, ನ.28 ದೇವರ ಹೆಣ, ನ.29 ದಾರಾ ಶಿಕೋ, ನ.30 ಚಾರು ವಸಂತ, ಡಿ.11 ದ್ರೌಪತಿ ಹೇಳ್ತವ್ಳೆ ನಾಟಕಗಳು ನಡೆಯಲಿವೆ. ಇನ್ನು ನಾಗಮಂಗಲ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕಲಾ ಶಾರದೆ ಲೀಲಾವತಿ ನೆನಪಿನ ವೇದಿಕೆಯಲ್ಲಿ ನವಂಬರ್ 25 ಸಂಜೆ 5.30ಕ್ಕೆ ಕನ್ನಡ ಕಾದಂಬರಿ ಕಾರರಾದ ಶ್ರೀ ಕುಂ ವೀರಭದ್ರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ರಂಗ ಗೌರವ ನಟ ರಂಗಕರ್ಮಿ ದೊಡ್ಡಣ್ಣನವರು ಭಾಗವಹಿಸಲಿದ್ದಾರೆ.

Ad

ಈ ಕುರಿತಂತೆ ಮಾತನಾಡಿದ ಕನ್ನಡ ಸಂಘದ ಅಧ್ಯಕ್ಷರಾದ ಆಲಮೇಲು ಅವರು, ನಾಗರಂಗ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸುವ ಮುಖಾಂತರ ನಾಟಕಗಳ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಸಂಘದ ನಿರ್ದೇಶಕರಾದ ಬಾಲಕೃಷ್ಣ, ಉಲ್ಲಾಸ್ ಮೊದಲಾದವರು ಹಾಜರಿದ್ದರು.

Ad
Ad
Ad
Nk Channel Final 21 09 2023