News Karnataka Kannada
Saturday, April 20 2024
Cricket
ಮನರಂಜನೆ

ಅಮರನಾಥ ಯಾತ್ರೆಯಲ್ಲಿ ಹರ್​ ಹರ್​ ಮಹಾದೇವ್ ಎಂದ ಸೈಫ್​ ಪುತ್ರಿ

saara alikhan
Photo Credit : News Kannada

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅಪ್ಪ ಮುಸ್ಲಿಂ ಆಗಿದ್ದರೂ ಹಿಂದೂ ಸಂಪ್ರದಾಯವನ್ನು ಪಾಲಿಸುತ್ತಿರುವ ಸಾರಾ ಅಲಿ ಇದಾಗಲೇ ಇದೇ ವಿಷಯಕ್ಕೆ ಒಂದು ವರ್ಗದಿಂದ ಸಕತ್​ ಟ್ರೋಲ್​ ಆಗಿದ್ದೂ ಇದೆ. ಆದರೆ ಯಾವುದೇ ಟ್ರೋಲ್​ಗೆ ಕೇರೇ ಮಾಡದೇ ಆಗಾಗ್ಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕೆಲ ದಿನಗಳ ಹಿಂದೆ ಕೇದಾರನಾಥಕ್ಕೆ ಭೇಟಿ ಕೊಟ್ಟರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸೌಂಡ್​ ಮಾಡಿತ್ತು.

ಇದೀಗ ಸಾರಾ ಅಲಿ ಖಾನ್​, ಸಾವಿರಾರು ಭಕ್ತರ ಜೊತೆಗೆ ತಾವೂ ಒಬ್ಬರಾಗಿ ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಭಂ ಭಂ ಭೋಲೆ ಎನ್ನುವ ಭಕ್ತರ ಜೊತೆಯಲ್ಲಿ ಹೋಗಿರುವ ನಟಿ, ಅಮರನಾಥ ಗುಹೆ ಹಾಗೂ ಭಕ್ತರ ಕುರಿತು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲಿರುವ ಸಂಪೂರ್ಣ ದರ್ಶನ ಮಾಡಿರುವ ಈಕೆ, ‘ಹರ ಹರ ಮಹದೇವ’ ಎಂದು ಜೈಕಾರ ಕೂಗಿದ್ದಾರೆ. ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎನ್ನುತ್ತಿದ್ದಾರೆ. ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ.

ಅಸಲಿಗೆ ಸೈಫ್​ ಅಲಿ ಖಾನ್​ ಅವರ ಎರಡೂ ಪತ್ನಿಯರು ಹಿಂದೂಗಳೇ. ಮೊದಲನೆಯ ಪತ್ನಿ ಅಮೃತಾ ಸಿಂಗ್​. ಅವರ ಮಗಳು ಸಾರಾ ಅಲಿ ಖಾನ್​. ಸೈಫ್​ ಅವರ ಎರಡನೆಯ ಪತ್ನಿ ಕರೀನಾ ಕಪೂರ್​. ಈ ಜೋಡಿಗೆ ಇಬ್ಬರು ಮಕ್ಕಳು. ಇದೇ ಕಾರಣಕ್ಕೆ ಅಮೃತಾ ಸಿಂಗ್​ ಅವರೂ ಹಿಂದೂವಾಗಿರುವುದನ್ನು ಕೆಲವು ಕಮೆಂಟಿಗರು ನೆನಪಿಸಿದ್ದಾರೆ. ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದಾರೆ.

https://www.instagram.com/reel/Cu_ZhQGrhOz/?utm_source=ig_web_button_share_sheet

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು