Ad

ಅಂಗಾಂಗ ದಾನ ಪ್ರತಿಜ್ಞೆ ಮಾಡಿದ ಬಾಲಿವುಡ್ ಸ್ಟಾರ್​ ಜೋಡಿ

Rithesh

ಮುಂಬೈ: ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್​ಮುಖ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆ ಆದವರು.  ಈ ಸೆಲೆಬ್ರಿಟಿ ಜೋಡಿ ಅಂಗಾಗ ದಾನ ಮಾಡುವ ಘೋಷಣೆ ಮಾಡಿದ್ದಾರೆ.

Ad
300x250 2

ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ದಂಪತಿಗೆ ಧನ್ಯವಾದ ಹೇಳಿದೆ. ರಿತೇಷ್ ಅವರ ವಿಡಿಯೋನ ಇವರು ಪೋಸ್ಟ್ ಮಾಡಿದ್ದಾರೆ.

ಬದುಕಿದ್ದಾಗಲೇ ಅಂಗಾಗ ದಾನಕ್ಕೆ ಸಹಿ ಹಾಕಬೇಕು. ಈ ರೀತಿ ಸಹಿ ಹಾಕಿದ ವ್ಯಕ್ತಿ ನಿಧನ ಹೊಂದಿದ ಬಳಿಕ ಕಣ್ಣು ಮೊದಲಾದ ಅಂಗಾಗಳನ್ನು ಪಡೆಯಲಾಗುತ್ತದೆ. ಇದನ್ನು ಅಗತ್ಯ ಇರೋ ವ್ಯಕ್ತಿಗಳಿಗೆ ನೀಡಲಾಗುತ್ತದೆ. ರಿತೇಷ್ ಹಾಗೂ ಜೆನಿಲಿಯಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಮೊದಲು ರಿತೇಷ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ನಾನು ಹಾಗೂ ಜೆನಿಲಿಯಾ ನಮ್ಮ ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇವೆ’ ಎಂದು ರಿತೇಷ್ ಹೇಳಿದ್ದರು. ಈ ವಿಚಾರವನ್ನು ಜೆನಿಲಿಯಾ ಕೂಡ ಖಚಿತಪಡಿಸಿದ್ದರು. ಈ ವಿಡಿಯೋನ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಹಂಚಿಕೊಂಡಿದೆ. ‘ರಿತೇಷ್ ಹಾಗೂ ಜೆನಿಲಿಯಾ ದಂಪತಿಗೆ ಧನ್ಯವಾದಗಳು. ಅವರು ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಇವರ ನಿರ್ಧಾರ ಅನೇಕರಿಗೆ ಸ್ಫೂರ್ತಿದಾಯಕವಾಗಲಿ’ ಎಂದು ಬರೆಯಲಾಗಿದೆ.

 

Ad
Ad
Nk Channel Final 21 09 2023
Ad