ಸತತ ಮೂರನೇ ಬಾರಿಗೆ ಮೋದಿ ದೇಶದ ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ. ಅವರಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.
Ad
ಕೌಶಲ್ಯ, ಅಭಿವೃದ್ಧಿ, ಶಿಕ್ಷಣ ಮತ್ತು ದೇಶದ ಸುರಕ್ಷತೆಯ ಕಡೆಗಿನ ನಿಮ್ಮ ಬದ್ಧತೆಗೆ ನಾವು ಧನ್ಯರು ಎಂದು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Ad
ಅಂದಹಾಗೆ, ಪ್ರಮಾಣವಚನ ಸಮಾರಂಭಕ್ಕೆ ರಾಜ್ಯ, ದೇಶ ಹಾಗೂ ವಿದೇಶಿ ಗಣ್ಯರೂ ಸೇರಿದಂತೆ ಸುಮಾರು 9 ಸಾವಿರ ಗಣ್ಯಮಾನ್ಯರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ 3 ಹಂತಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
Ad
Ad