Bengaluru 26°C
Ad

ರಶ್ಮಿಕಾ ಬಳಸ್ತಾರೆ ನೇರಳೆ ಟೂತ್​​ಪೇಸ್ಟ್; ಇದರ ಬೆಲೆ ಎಷ್ಟು ಗೊತ್ತಾ?

Rashmika

ನಟಿ ಇತ್ತೀಚೆಗೆ ಇನ್​ಸ್ಟಾಗ್ರಾಮ್​​ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ನಟಿ ಬ್ರಶ್ ಮಾಡುವುದು, ರೆಡಿಯಾಗುವುದನ್ನು ತೋರಿಸಿದ್ದಾರೆ. ಈ ವೇಳೆ ನಟಿ ಪರ್ಪಲ್ ಬಣ್ಣದ ಟೂತ್​ಪೇಸ್ಟ್ ಬಳಸಿದ್ದು ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ. ಇದು ಜಾಹೀರಾತು ಭಾಗವೇ ಎನ್ನುವುದು ಖಚಿತವಾಗಿಲ್ಲ.

ನಟಿ ಇತ್ತೀಚೆಗೆ ತಾವು ಕಾಲ್ಗೇಟ್ ವಿಸಿಬಲ್ ವೈಟ್ ಪರ್ಪಲ್ ಟೂತ್​ಪೇಸ್ಟ್ ಬಳಸುವುದಾಗಿ ರಿವೀಲ್ ಮಾಡಿದ್ದಾರೆ. ಇದರ ಬೆಲೆ 152 ರೂಪಾಯಿ ಇದೆ. ಇನ್ನು ಕೆಲವೊಂದು ಆನ್​ಲೈನ್ ವೆಬ್​​ಸೈಟ್​ ಪ್ರಕಾರ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ. ಅಂದ ಹಾಗೆ ನಟಿ ನಿತ್ಯವೂ ಹಲ್ಲುಜ್ಜಲು ಬಳಸೋ ಪೇಸ್ಟ್ ಬೆಲೆ 152 ರೂಪಾಯಿ.

ಬ್ರಶ್ ಮಾಡುವುದು, ಕ್ಲೀನಿಂಗ್, ಮಾಯ್ಚರೈಸಿಂಗ್, ಸನ್​ ಸ್ಕ್ರೀನ್ ಹಾಕುವುದು, ಲಿಪ್ ಬಾಮ್ ನನ್ನ ನಿತ್ಯದ ಅಗತ್ಯ. ಇದು ತುಂಬಾ ಬೇಸಿಕ್, ಆದರೆ ಆ ಕಾಂತಿಗೆ ಇದುವೇ ಕಾರಣ. ಕಲರ್ ಥೆರಪಿಯಲ್ಲಿ ಮ್ಯಾಜಿಕ್ ಇದೆ. ಪರ್ಪಲ್ ಹಳದಿಯನ್ನು ಓಡಿಸುತ್ತದೆ ಎಂದು ನಟಿ ಪೋಸ್ಟ್​ಗೆ ಕ್ಯಾಪ್ಶನ್ ಬರೆದಿದ್ದರು

ನಟಿ ಪೇಸ್ಟ್ ಹಾಕುವಲ್ಲಿಂದ ಹಲ್ಲುಜ್ಜುವ ತನಕ ಎಲ್ಲವನ್ನೂ ತೋರಿಸಿದ್ದಾರೆ. ಸಿಂಪಲ್ ಆಗಿಯೇ ಸ್ಕಿನ್ ಕೇರ್ ಮಾಡಿದ್ದಾರೆ. ನೆಟ್ಟಿಗರೆಲ್ಲ ನಟಿಯ ಮಾರ್ನಿಂಗ್ ರೊಟೀನ್ ಕುತೂಹಲದಿಂದ ವೀಕ್ಷಿಸಿದ್ದಾರೆ.

Ad
Ad
Nk Channel Final 21 09 2023