ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದು, ಫೆಬ್ರವರಿ 21ರಂದು ಆಪ್ತ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ಗೋವಾನಲ್ಲಿ ಈ ವಿವಾಹ ಕಾರ್ಯಕ್ರಮ ನಡೆಯಲಿದೆ.
ಮದುವೆ ತಯಾರಿಗಳು ಈಗಾಗಲೇ ಮುಗಿದ್ದು ರಕುಲ್ ಹಾಗೂ ಜಾಕಿ ಬಗ್ನಾನಿ ಅತಿಥಿಗಳನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ.ರಕುಲ್-ಜಾಕಿ ಡೆಸ್ಟಿನೇಷನ್ ವೆಡ್ಡಿಂಗ್ ಆಗುತ್ತಿದ್ದು, ರಕುಲ್ರ ಮದುವೆ ಉಡುಗೆಯನ್ನು ಮನೀಷ್ ಮಲ್ಹೋತ್ರಾ ತರುಣ್ ತಲ್ಲಿಯಾನಿ ಅವರುಗಳು ವಿನ್ಯಾಸ ಮಾಡಲಿದ್ದಾರೆ. ಸಬ್ಯಸಾಚಿ ಬ್ರ್ಯಾಂಡ್ನ ಉಡುಗೆಗಳನ್ನು ಸಹ ಮದುವೆಯ ವಿವಿಧ ಸಂದರ್ಭಗಳಲ್ಲಿ ರಕುಲ್ ಹಾಗೂ ಜಾಕಿ ಬಗ್ನಾನಿ ಧರಿಸಲಿದ್ದಾರೆ.
ಇನ್ನು ರಕುಲ್ ಪ್ರೀತ್ ಸಿಂಗ್ ಮದುವೆಯಾಗುತ್ತಿರುವ ಜಾಕಿ ಬಗ್ನಾನಿ, ಸ್ವತಃ ನಟ ಹಾಗೂ ನಿರ್ಮಾಪಕ ಆಗಿದ್ದಾರೆ.