Bengaluru 23°C
Ad

ಸೈಮಾ 2024: ರಕ್ಷಿತ್ ಶೆಟ್ಟಿ ಶ್ರೇಷ್ಠ ನಟ, ಚೈತ್ರಾ ಶ್ರೇಷ್ಠ ನಟಿ ಪುರಸ್ಕಾರ

Siim

ದುಬೈ: `ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿ ಹಾಗೂ ಟೋಬಿ ಚಿತ್ರದ ಅಭಿನಯಕ್ಕಾಗಿ ಚೈತ್ರಾ ಆಚಾರ್ ಸೈಮಾ 2024 ಸಾಲಿನ ಶ್ರೇಷ್ಠ ನಟ ಮತ್ತು ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕೆ ಈ ಸಲ ಆರು ಪ್ರಶಸ್ತಿಗಳು ಒಲಿದು ಬಂದಿವೆ, ನಿರ್ದೇಶಕ ಹೇಮಂತ್‌ ಎಂ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದ್ದಾರೆ.

ದುಬೈನಲ್ಲಿ ಶನಿವಾರ ರಾತ್ರಿ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಯಿತು. ದರ್ಶನ್ ಅಭಿನಯಿಸಿ ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರಕ್ಕೆ ಶ್ರೇಷ್ಠ ಚಿತ್ರ ಪ್ರಶಸ್ತಿ ಲಭಿಸಿದೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಹೇಮಂತ್ ರಾವ್ ಗಳಿಸಿದ್ದಾರೆ.

ಸೈಮಾ 2024 ಪ್ರಶಸ್ತಿ ಪಟ್ಟಿ ಹೀಗಿದೆ

ಅತ್ಯುತ್ತಮ ಚಿತ್ರ: ಕಾಟೇರ

ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ

ಅತ್ಯುತ್ತಮ ನಟಿ: ಚೈತ್ರ ಆಚಾರ್ (ಟೋಬಿ)

ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ (ಕನ್ನಡ): ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)

ಅತ್ಯುತ್ತಮ ನಟ (ವಿಮರ್ಶಕರು): ಧನಂಜಯ (ಗುರುದೇವ್ ಹೊಯ್ಸಳ)

ಅತ್ಯುತ್ತಮ ನಟಿ (ವಿಮರ್ಶಕರು): ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಅತ್ಯುತ್ತಮ ಚೊಚ್ಚಲ ನಟಿ: ಆರಾಧನಾ (ಕಾಟೆರಾ)

ಋಣಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ: ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಕಾಟೇರ)

ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ಮಂಗ್ಲಿ (ಕಾಟೇರಾ)

ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ಕಪಿಲ್ ಕಪಿಲನ್ (ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ)

ಎಕ್ಸಲೆನ್ಸ್ ಇನ್ ಸಿನಿಮಾ ಪ್ರಶಸ್ತಿ: ಶಿವರಾಜ್ ಕುಮಾರ್

Ad
Ad
Nk Channel Final 21 09 2023