News Karnataka Kannada
Tuesday, April 23 2024
Cricket
ಮನರಂಜನೆ

ಇಂದು ಕಿಚ್ಚ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆಗೆ ಮುಂದಾದ ನಿರ್ಮಾಪಕ ಎನ್.ಕುಮಾರ್

producer mn kumar
Photo Credit :

ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ವಿರುದ್ಧ ಕೋರ್ಟಿನಲ್ಲಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸುತ್ತಿದ್ದಂತೆಯೇ ನಿರ್ಮಾಪಕ ಎನ್.ಕುಮಾರ್ ನ್ಯಾಯಕ್ಕಾಗಿ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದಿರುವ ಡಾ.ರಾಜ್ ಕುಮಾರ್ ಪ್ರತಿಮೆಯ ಬಳಿ ಅವರು ಪ್ರತಿಭಟನೆಗೆ ಕೂರಲಿದ್ದಾರೆ. ತಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಎನ್ನುವುದು ಅವರು ಆಗ್ರಹವಾಗಿರಲಿದೆಯಂತೆ.

ನಿರ್ಮಾಪಕ ಎನ್.ಕುಮಾರ್ ವಿರುದ್ದ ಕಾನೂನು ಸಮರಕ್ಕೆ ಈಗಾಗಲೇಸುದೀಪ್ ಅಧಿಕೃತವಾಗಿ ಇಳಿದಿದ್ದಾರೆ. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು, ನಿರ್ಮಾಪಕ ಎನ್.ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್, ‘ನಾನು ಯಾರಿಗೆ ಉತ್ತರ ಕೊಡಬೇಕಿದೆಯೋ, ಅದನ್ನು ಕೋರ್ಟಿನಲ್ಲಿ ಕೊಡುವೆ’ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು