ಹೈದರಾಬಾದ್: ತೆಲುಗು ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕ ಕೊಮರಿ ಜನಯ್ಯ ನಾಯ್ಡು(44) ವಿಧಿವಶರಾಗಿದ್ದಾರೆ. ಮಂಗಳವಾರ ಕುಕಟ್ಪಲ್ಲಿಯ ಭಾಗ್ಯ ನಗರದ ಹೋಟೆಲ್ನಲ್ಲಿ ನೇಣುಬಿದಿಕೊಂಡ ಸ್ಥಿತಿಯಲ್ಲಿ ಜನಯ್ಯ ನಾಯ್ಡು ಅವರ ಶವವಾಗಿ ಪತ್ತೆಯಾಗಿದೆ.
ವರದಿಗಳ ಪ್ರಕಾರ, ನಾಯ್ಡು ತಮ್ಮ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನು ಗಮನಿಸಿದ ಹೋಟೆಲ್ ಆಡಳಿತ ಮಂಡಳಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ ನಂತರ, ನಾಯ್ಡು ಅವರು ತೊಲುಬೊಮ್ಮಲ ಸಿತ್ರಾಲು ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಅದರಲ್ಲಿ ಅವರು ಕೆಲವು ವರ್ಷಗಳ ಹಿಂದೆ ‘ಜಿಎಸ್ಟಿ (ಗಾಡ್ ಸೈಥಾನ್ ಟೆಕ್ನಾಲಜಿ)’ ಎಂಬ ಸಣ್ಣ ಚಲನಚಿತ್ರವನ್ನು ಮಾಡಿದರು. ಈ ಚಿತ್ರವು ವಿಫಲವಾಗಿತ್ತು.
ಇನ್ನು ಜನಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜನಯ್ಯನ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.