News Karnataka Kannada
Saturday, April 27 2024
ಮನರಂಜನೆ

ಪ್ರಶಾಂತ್​ ಸಂಬರ್ಗಿ ಅವರಿಗೆ ಕೊಲೆ ಬೆದರಿಕೆ: ಎಫ್​ಐಆರ್​ ದಾಖಲು

ಮಾಜಿ ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರ್ಗಿ ಅವರಿಗೆ ವಾಟ್ಸಪ್​ ಮತ್ತು ಇ-ಮೇಲ್​ ಮೂಲಕ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. 
Photo Credit : NewsKarnataka

ಬೆಂಗಳೂರು: ಮಾಜಿ ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರ್ಗಿ ಅವರಿಗೆ ವಾಟ್ಸಪ್​ ಮತ್ತು ಇ-ಮೇಲ್​ ಮೂಲಕ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.

ಆ್ಯಸಿಡ್​​ ಹಾಕುವುದಾಗಿ ವಿದೇಶದ ಮೊಬೈಲ್​ ಸಂಖ್ಯೆಗಳಿಂದ ಪ್ರಶಾಂತ್ ಸಂಬರ್ಗಿ ಅವರಿಗೆ ಬೆದರಿಕೆ ಸಂದೇಶ ಬಂದಿದೆ.  ಈ ಸಂಬಂಧವಾಗಿ ಪ್ರಶಾಂತ್​ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಬೆದರಿಕೆ  ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್​ ಸಂಬರ್ಗಿ ಅವರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕ, ಕ್ರೊಯೇಷ್ಯಾ ಮುಂತಾದ ದೇಶಗಳ ವಾಟ್ಸಪ್​ ಸಂಖ್ಯೆಗಳನ್ನು ಬಳಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಪ್ರಶಾಂತ್​ ಸಂಬರ್ಗಿ ಅವರ ಫ್ಯಾಮಿಲಿ ಫೋಟೋವನ್ನು ಕಳಿಸಿ, ‘ಟಾರ್ಗೆಟ್​’ ಎಂದು ಬರೆಯಲಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೂಡ ಬಲಿ ತೆಗೆದುಕೊಳ್ಳುವುದಾಗಿ ಬೆದರಿಕೆ ಸಂದೇಶ ಕಳಿಸಲಾಗಿದೆ.

‘ಮಾರ್ಚ್​ 10ರ ಮಧ್ಯರಾತ್ರಿಯಿಂದ ನನಗೆ ಮೇಲ್ಕಂಡ ಮೊಬೈಲ್​ ಸಂಖ್ಯೆಗಳಿಂದ ಬೆದರಿಕೆ ಸಂದೇಶ ಬಂದಿದೆ. ನಮ್ಮ ಫೋಟೋ ಕಳಿಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನಮ್ಮ ಮೊಬೈಲ್​ ಹ್ಯಾಕ್​ ಮಾಡಲಾಗಿದೆ. ಅದರಲ್ಲಿನ ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ. ವೈಯಕ್ತಿಕ ಫೋಟೋ, ಕಾಲ್​ ರೆಕಾರ್ಡ್, ಎಸ್​ಎಂಎಸ್​ ಹಾಗೂ ಇಮೇಲ್​ಗಳನ್ನು ಟ್ರಾನ್ಸ್​ಫರ್​ ಮಾಡಲಾಗಿದೆ’ ಎಂದು ಪ್ರಶಾಂತ್​ ಸಂಬರ್ಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು