ಹಾಲಿವುಡ್‌ನ ಜನಪ್ರಿಯ ನಟಿ ಮ್ಯಾಗಿ ಸ್ಮಿತ್ ಅವರು ನಿಧನರಾಗಿದ್ದಾರೆ. ‘ಹ್ಯಾರಿ ಪಾಟರ್’ ಖ್ಯಾತಿಯ ನಟಿ ಮ್ಯಾಗಿ ಸ್ಮಿತ್ 89ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ನಟಿ ಮ್ಯಾಗಿ ಸ್ಮಿತ್ ಅವರು ಇಬ್ಬರೂ ಮಕ್ಕಳು ಮತ್ತು 5 ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮ್ಯಾಗಿ ಸ್ಮಿತ್ ಅವರು ಸೆ.27ರಂದು ನಿಧನರಾಗಿದ್ದು, ಈ ವಿಚಾರವನ್ನು ಮಕ್ಕಳು ಅಧಿಕೃತವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಂದಹಾಗೆ, ಮ್ಯಾಗಿ ಸ್ಮಿತ್ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
60ರ ದಶಕದಿಂದ ಸಿನಿಮಾಗಳಲ್ಲಿ ನಟಿಸುವುದ್ದಕ್ಕೆ ಆರಂಭಿಸಿದ್ದ ಮ್ಯಾಗಿ ಸ್ಮಿತ್ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇವರ ವೃತ್ತಿ ಬದುಕಿನಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ.
Ad