Bengaluru 23°C

“ಪಿಲಿಪಂಜ” ತುಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಯಸ್ ಬಿ ಗ್ರೂಪ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಅವರ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿ ನಿರ್ದೇಶನದ "ಪಿಲಿಪಂಜ" ವಿಭಿನ್ನ ಶೈಲಿಯ ತಂತ್ರಜ್ಞಾನದ ತುಳು ಸಿನಿಮಾ

ಮಂಗಳೂರು: ಯಸ್ ಬಿ ಗ್ರೂಪ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಅವರ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ಞಾನದ ತುಳು ಸಿನಿಮಾದ “ಫಸ್ಟ್ ಲುಕ್ ಪೋಸ್ಟರನ್ನು ಜ: 27 ಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವ ವನದುರ್ಗೆಎಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ವೇದಮೂರ್ತಿ ಬಿ ಕೆ ವಿಘ್ಣೇಶ್ ಭಟ್ ಅವರು ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಾಶೀರ್ವಾದ ನೀಡಿದರು.


ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀಧರ್ ಭಟ್, ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ಇದರ ಸಂಚಾಲಕರಾದ ಸಂದೀಪ್ ವಿ ಪೂಜಾರಿ, ಚಿತ್ರದ ನಿರ್ಮಾಪಕರಾದ ಪ್ರತೀಕ್ ಯು ಪೂಜಾರಿ ಕಾವೂರು, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಹಾಗೂ ನಟ ರಮೇಶ್ ರೈ ಕುಕ್ಕುವಳ್ಳಿ, ಪ್ರೊಡಕ್ಷನ್ ಮೆನೇಜರ್ ಕಾರ್ತಿಕ್ ಶೆಟ್ಟಿ, ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು.


” ಪಿಲಿಪಂಜ” ಚಲನಚಿತ್ರವು ಎರಡು ಹಂತದ ಚಿತ್ರೀಕರಣವನ್ನು ಮುಗಿಸಿದ್ದು, ಇನ್ನು ಹಾಡಿನ ಚಿತ್ರೀಕರಣ ಬಾಕಿ ಇದ್ದು ಫ್ರೆಬ್ರವರಿ ಮೊದಲ ವಾರದಲ್ಲಿ ಅದನ್ನೂ ಮಾಡಿ ಮುಗಿಸಿ ಶೀಘ್ರದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ಚಿತ್ರತಂಡವಿದೆ.


ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವಪ್ರಕಾಶ್ ಪೂಂಜ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ರಕ್ಷಣ್ ಮಾಡೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ವಿಜಯಹರಿ ರೈ, ದಯಾನಂದ ಬೆಟ್ಟಂಪಾಡಿ, ರೂಪಶ್ರೀ ವರ್ಕಾಡಿ, ಜಯಶೀಲ, ರಾಧಿಕಾ,ಭಾಸ್ಕರ್ ಮಣಿಪಾಲ, ಹಾಗೂ ನಾಯಕಿಯಾಗಿ ದಿಶಾರಾಣಿ ಮುಂತಾದವರು ಬಣ್ಣ ಹಚ್ಚಿದ್ದಾರೆ.


ನಿರ್ಮಾಣ ಪ್ರತೀಕ್ ಯು ಪೂಜಾರಿ, ಕಥೆ- ನಿರ್ದೇಶನ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ, ಛಾಯಾಗ್ರಹಣ ಉದಯ ಬಳ್ಳಾಲ್, ಸಂಗೀತ ಲಾಯ್ ವೆಲೆಂಟೀನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಹನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶನ ಸಜೇಶ್ ಪೂಜಾರಿ, ಚಿತ್ರಕಥೆ ಸಂಭಾಷಣೆ ಸುರೇಶ್ ಬಲ್ಮಠ, ಪ್ರಚಾರ ಜಗನ್ನಾಥ ಶೆಟ್ಟಿ ಬಾಳ, ಸಾಹಸ ಸುರೇಶ್ ಶೆಟ್ಟಿ ಮತ್ತು ನವೀನ್ ಲೋಬೋ,ನೃತ್ಯ ನಿರ್ದೇಶನ ರಾಜೇಶ್ ಕಣ್ಣೂರು, ಪ್ರೊಡಕ್ಷನ್ ಮನೇಜರ್ ಕಾರ್ತಿಕ್ ಶೆಟ್ಟಿ.


Nk Channel Final 21 09 2023