Ad

ವಿನಯ್​ ರಾಜ್​ಕುಮಾರ್​ ನಟನೆಯ ‘ಪೆಪೆ’ ಸಿನಿಮಾ ‘ಕೆಆರ್‌ಜಿ’ ಮೂಲಕ ರಿಲೀಸ್‌ಗೆ ಸಿದ್ದ

ಕನ್ನಡ ಚಿತ್ರರಂಗದ ಯುವ ನಟ ವಿನಯ್‌ ರಾಜಕುಮಾರ್‌ ಅಭಿಯದ ‘ಪೆಪೆ’ ಸಿನಿಮಾ  ಶೀಘ್ರದಲ್ಲೇ ವಿತರಣೆ ಮಾಡಲು ‘ಕೆಆರ್​ಜಿ’ ಸಂಸ್ಥೆ ಮುಂದೆ ಬಂದಿದೆ. ಹೌದು, ‘ಕೆಆರ್‌ಜಿ ಸ್ಟುಡಿಯೋಸ್’ ಮೂಲಕ ‘ಪೆಪೆ’ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಅವರು ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.

‘ಪೆಪೆ’ ಮತ್ತು ‘ಕೆಆರ್​ಜಿ ಸ್ಟುಡಿಯೋಸ್’ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇಷ್ಟು ದಿನ ಕ್ಲಾಸ್ ಹೀರೋ ಪಾತ್ರಗಳಲ್ಲಿ ಸೈ ಎನಿಸಿಕೊಂಡ ವಿನಯ್ ರಾಜ್​ಕುಮಾರ್​ ಅವರು ಈಗ ‘ಪೆಪೆ’ ಸಿನಿಮಾದಲ್ಲಿ ಮಾಸ್ ಗೆಟಪ್​ ತಾಳಿದ್ದಾರೆ. ಇದು ಕೂಡ ಸಿನಿಮಾದ ವಿಶೇಷತೆಗಳಲ್ಲಿ ಒಂದು. ಈಗಾಗಲೇ ಹೊರಬಂದಿರುವ ಟೈಟಲ್​ ಸಾಂಗ್​ ಸದ್ದು ಮಾಡಿದೆ.

ಸದ್ಯದಲ್ಲೇ ‘ಪೆಪೆ’ ಸಿನಿಮಾ ಬಿಡುಗಡೆ ಆಗಲಿದೆ. ರವಿವರ್ಮ, ಡಿಫರೆಂಟ್‌ ಡ್ಯಾನಿ, ಚೇತನ್‌ ಡಿಸೋಜಾ, ನರಸಿಂಹ ಅವರು ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಮೈಸೂರು, ಬೆಂಗಳೂರು, ಕೊಡಗು, ಸಕಲೇಶಪುರ ಮುಂತಾದೆಡೆ ಸಿನಿಮಾದ ಶೂಟಿಂಗ್​ ನಡೆದಿದೆ. ‘ಉದಯ್‌ ಸಿನಿ ವೆಂಚರ್‌’, ‘ದೀಪಾ ಫಿಲ್ಮ್ಸ್ ಬ್ಯಾನರ್‌’ ಮೂಲಕ ಉದಯ್ ಶಂಕರ್ ಎಸ್. ಮತ್ತು ಬಿ.ಎಮ್. ಶ್ರೀರಾಮ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

Ad
Ad
Nk Channel Final 21 09 2023