Bengaluru 25°C
Ad

ಡಿವೋರ್ಸ್​​ ಕುರಿತು ಸುದ್ದಿಗೋಷ್ಠಿಯಲ್ಲಿ ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ – ನಿವೇದಿತಾಗೌಡ !

Chandan Nivi

ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ದೂರವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಗುಡ್ ಬಾಯ್ ಹೇಳಿರುವ ಈ ಜೋಡಿಯ ವಿಚಾರ ಇಂಡಸ್ಟ್ರಿ ಮಾತ್ರವಲ್ಲ ಫ್ಯಾನ್ಸ್​ಗೂ ಹರ್ಟ್​ ಮಾಡಿತ್ತು. ಆದ್ರೆ ಯಾವ ಕಾರಣಕ್ಕೆ ಇವರು ದೂರವಾದ್ರೂ ಅನ್ನೋದು ಗೊಂದಲಗಳನ್ನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮಾಧ್ಯಮಗೋಷ್ಠಿ ನಡೆಸಿದ್ದಾರೆ.

ಮೊದಲು ಮಾತನಾಡಿದ ಚಂದನ್ ಶೆಟ್ಟಿ ಅವರು, ಇಡೀ ಕರ್ನಾಟಕಕ್ಕೆ ನಿಜವಾದ ಮಾಹಿತಿ ಕೊಡೋಕೆ ಈ ಪ್ರೆಸ್​ಮೀಟ್ ಮಾಡುತ್ತಿದ್ದೇವೆ. ಕೋರ್ಟ್ ನಮಗೆ ಈಗಾಗಲೇ ವಿಚ್ಚೇದನ ಕೊಟ್ಟಿದೆ. ಎಲ್ಲರಿಗೂ ಒಂದು ಪ್ರಶ್ನೆ ಕಾಡ್ತಿದೆ. ಅದು ಯಾಕೆ ಈ ಜೋಡಿ ದೂರ ದೂರಾದರು ಅಂತ. ಅದಕ್ಕೆ ಕ್ಲಾರಿಫಿಕೇಷನ್ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಕೊಡಲಾಗಿದೆ. ಕೆಲವರು ಬೇಡದ ವಿಚಾರ ಸೃಷ್ಟಿ ಮಾಡಿ ಹಂಚುತ್ತಿದ್ದಾರೆ. ಇದಕ್ಕೆ ಕ್ಲಾರಿಟಿ ಈಗ ಜೊಡುತ್ತಿದ್ದೇವೆ.

ನಾನು ಬೆಳೆದ ರೀತಿನೇ ಬೇರೆ. ನಾನು – ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರೋ ರೀತಿನೇ ಬೇರೆ ಇದೆ. ಇಬ್ಬರ ಜೀವನ ಶೈಲಿ ಬೇರೆ ಇದೆ. ಇದು ವರ್ಷಗಳು ಕಳೆದರೂ ಹೊಂದಾಣಿಕೆ ಆಗಲಿಲ್ಲ. ಈ ಕಾರಣಕ್ಕಾಗಿಯೇ ಮುಂದಾಗಿದ್ದೇವೆ. ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಯಾವುದು ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ, ವಿಚ್ಚೇದನ ಬೇಕಿತ್ತು. ಈ ಕಾರಣಕ್ಕೆ ನಾವು ಈಗ ದೂರ ದೂರ ಆಗಿದ್ದೇವೆ. ಇಬ್ಬರು ಮಾತನಾಡಿಕೊಂಡು, ಒಪ್ಪಿಕೊಂಡು ಒಮ್ಮತದಿಂದಲೇ ಬೇರೆ ಬೇರೆ ಆಗಿದ್ದೇವೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ಸಾಮಾನ್ಯ. ಆದರೆ, ನಿವೇದಿತಾ ಇಂಡಿಪೆಂಡೆಂಟ್​​​ ವುಮೆನ್​​. ಅವರು ತಮ್ಮ ಕರಿಯರ್​ನಲ್ಲಿ ಬ್ಯುಸಿ ಆಗಿ ದುಡಿಯುತ್ತಿದ್ದಾರೆ. ನಾನು ಯಾವುದೇ ಜೀವನಾಂಶ ನೀಡಿಲ್ಲ, ಅವರು ಯಾವುದೇ ರೀತಿಯ ಡಿಮ್ಯಾಂಡ್​​ ಇಟ್ಟಿಲ್ಲ. ಮದುವೆ ಆದ ದಿನದಿಂದಲೂ ಇಷ್ಟಕ್ಕಿಂತ ಕಷ್ಟವೇ ಇತ್ತು.ಈ ಕಾರಣಕ್ಕೆ ಡಿವೋರ್ಸ್‌ ತಗೊಂಡಿದ್ದೇವೆ.

ನಾವು ಇಬ್ಬರೂ ವೃತ್ತಿಜೀವನದಲ್ಲಿ ಬಿಜಿಯಾಗಿದ್ದೇವೆ. ಯಾರೂ ಜೀವನಾಂಶ ಕೇಳಿಲ್ಲ. ತುಂಬಾ ಗೌರವಯುತವಾಗಿ ದಾಂಪತ್ಯ ಜೀವನದಿಂದ ಇಬ್ಬರೂ ಹೊರಗೆ ಬಂದಿದ್ದೇವೆ. ಇಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಗೌರವ ಇದೆ ಎಂದರು.

ಈಗ ಸೋಶಿಯಲ್ ಮೀಡಯಾದಲ್ಲಿ ಹರಿದಾಡುತ್ತಿರೋ ವದಂತಿಗಳೆಲ್ಲ ಫೇಕ್. ನಮ್ಮಿಬ್ಬರ ಮಧ್ಯೆ 3ನೇ ವ್ಯಕ್ತಿ ಬಂದಿರೋ ವಿಚಾರವೆಲ್ಲ ಸುಳ್ಳು. ಯಾರು ಇವುಗಳನ್ನು ನಂಬಲೇಬಾರದು. ಆ 3ನೇ ವ್ಯಕ್ತಿ ಮನೆಗೆ ನಾನು ಹೋಗಿದ್ದೀನಿ. ಅವರು ನಮಗೆ ಫ್ಯಾಮಿಲಿ ಥರಾ.‌ ಅವರದ್ದು ದೊಡ್ಡ ಮನೆ. ನಾವಿಬ್ಬರು ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೀವಿ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರೋದು ವಿಕೃತಿ ಅನ್ನಿಸುತ್ತಿದೆ. ಅವರ ಮನೇಲಿ ಯಾವುದೇ ಕಾರ್ಯಕ್ರಮ ಆದರೂ ನಾವು ಒಟ್ಟಿಗೆ ಹೋಗುತ್ತಿದ್ದೇವು. ಅವ್ರಿಗೂ ಫ್ಯಾಮಿಲಿ ಇದೆ ಅನ್ನೋದನ್ನು ಮರಿಬೇಡಿ. ಯಾವುದೋ ಫೋಸ್ಟ್ ನೋಡಿ ಈ ಥರಾ ಮಾಡಬೇಡಿ. ಇಂಪ್ಯಾಕ್ಟ್ ನಾನು ಅವ್ರಿಗೆ ಕಾಲ್ ಮಾಡಿ ಕೇಳಿದ್ದೆ. ಅವ್ರಿಬ್ಬರು ನಮಗೆ ಧೈರ್ಯ ತುಂಬಿದರು ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ.

Ad
Ad
Nk Channel Final 21 09 2023
Ad