ಹೈದರಾಬಾದ್: ಜೂ.ಎನ್ ಟಿಆರ್‌ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ದೇವರ ಪಾರ್ಟ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ.ಇತ್ತೀಚೆಗಷ್ಟೇ ಅಂದರೆ ಗಣೇಶ ಹಬ್ಬದ ಸಂದರ್ಭದಲ್ಲಿ ಹೊಸ ಪೋಸ್ಟರ್ ರಿಲೀಸ್ ಮಾಡಿ ಟ್ರೇಲರ್ ಡೇಟ್ ರಿವೀಲ್ ಮಾಡಿತ್ತು. ಸೆ.10 ರಂದು ಟ್ರೇಲರ್ ರಿಲೀಸ್ ಆಗಲಿದ್ದು, ಫ್ಯಾನ್ಸ್‌ಗಳು ಕ್ಷಣ ಕ್ಷಣಕ್ಕೂ ಎಕ್ಸೈಟ್ ಆಗುತ್ತಿದ್ದಾರೆ.
ಹಾಡು ಹಾಗೂ ಪೋಸ್ಟರ್‌ಗಳಿಂದ ನಿರೀಕ್ಷೆ ಹೆಚ್ಚಿಸಿರುವ ʼದೇವರʼ ಚಿತ್ರದ ಡಿಜಿಟಲ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. 155 ಕೋಟಿ ರೂ. ಕೊಟ್ಟು ನೆಟ್‌ಫ್ಲಿಕ್ಸ್ ʼದೇವರʼ ಡಿಜಿಟಲ್ ಹಕ್ಕನ್ನು ಖರೀದಿಸಿದೆ ಎಂದು ವರದಿಯಾಗಿದೆ. ಇದು ಯಾವುದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತೆಲುಗು ಚಲನಚಿತ್ರವೊಂದಕ್ಕೆ ಸಿಕ್ಕ ಅತ್ಯಂತ ದುಬಾರಿ ಡೀಲ್ ಎಂದು ವರದಿಯಾಗಿದೆ.
Ad