ಚೆನ್ನೈ: ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋ ವೈರಲ್ ಆಗಿದೆ. ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೌದು. . ಬರೋಬ್ಬರಿ 4 ವರ್ಷಗಳ ದಾಂಪತ್ಯ ಜೀವನದ ಬಳಿಕ ಸೌತ್ ಇಂಡಿಯಾ ಸ್ಟಾರ್ ಹೀರೋಯನ್ ನಟಿ ಸ್ಯಾಮ್, ತೆಲುಗು ಸೂಪರ್ ಹೀರೋ ನಾಗಚೈತನ್ಯ ಡಿವೋರ್ಸ್ ತೆಗೆದುಕೊಂಡಿದ್ದರು.
ಇದೀಗ ಸೂಪರ್ ಸ್ಟಾರ್ ಅಕ್ಕಿನೆನಿ ನಾಗರ್ಜುನ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಇಂದು ಹೈದರಾಬಾದ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸ್ವತ: ನಾಗರ್ಜುನ್ ಅಕ್ಕಿನೆನಿ ಅವರೇ ಫೋಟೊ ಶೇರ್ ಮಾಡಿ ವಿಶ್ ಮಾಡಿದ್ದಾರೆ.
ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅದರಲ್ಲೂ ಸ್ಯಾಮ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಇದಾಗಿದೆ. ಕೆಲವು ದಿನಗಳ ಹಿಂದೆ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು. ನಟನ ಜೊತೆ ವೆಕೇಶನ್ಗೂ ಹೋಗಿದ್ದರು. ಇನ್ನೇನು ಮದುವೆ ಆಗ್ತಾರೆ ಎಂಬ ಗುಸುಗುಸ ಚರ್ಚೆ ಹಬ್ಬಿತ್ತು. ಈ ಬೆನ್ನಲ್ಲೇ ನಾಗ ಚೈತನ್ಯ ನಟಿ ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
https://x.com/iamnagarjuna/status/1821450886238851531