ಹೈದರಾಬಾದ್: ಕಳೆದ ಕೆಲ ವರ್ಷಗಳಿಂದ ಟಾಲಿವುಡ್‌ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲಇಬ್ಬರು ಡೇಟಿಂಗ್‌ನಲ್ಲಿರುವ ವಿಚಾರ ಹರಿದಾಡುತ್ತಿದೆ.
ಈ ಡೇಟಿಂಗ್ ವಿಚಾರ ಮತ್ತೊಂದು ಹಂತಕ್ಕೆ ತಲುಪಿದೆ ಎನ್ನಲಾಗಿದ್ದು, ನಾಗಚೈತನ್ಯ ಶೋಭಿತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಚಾರ ಟ್ರೆಂಡ್ ಆಗಿದೆ.
ಇತ್ತೀಚಿನ ವರ್ಷದಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರು ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ವಿದೇಶದಲ್ಲಿ ಇಬ್ಬರು ಹಾಲಿ ಡೇ ಮೂಡ್ ನಲ್ಲಿರುವ ಕೆಲ ಫೋಟೋಗಳು ಹರಿದಾಡಿತ್ತು. ಆದರೆ ಇಬ್ಬರು ತಮ್ಮ ಡೇಟಿಂಗ್ ಬಗ್ಗೆ ಬಹಿರಂಗವಾಗಿ ಎಲ್ಲೂ ಕೂಡ ಬಾಯಿಬಿಡದೆ, ಗೌಪ್ಯವಾಗಿ ರಿಲೇಷನ್ ಶಿಪ್ ನಲ್ಲಿದ್ದರು. ಇನ್ನು ಇಂದು ನಾಗಚೈತನ್ಯ ಅವರ ನಿವಾಸದಲ್ಲಿ ಮನೆಯವರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಕಾರ್ಯಕ್ರಮ ನಡೆಯಲಿದೆ ಎಂದು ‘ ಗ್ರೇಟ್ ಆಂಧ್ರ’ ವರದಿ ಮಾಡಿದೆ.
ಸದ್ಯ ನಾಗಚೈತನ್ಯ ಹಾಗೂ ಶೋಭಿತಾ ಅವರಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Ad