ಮುಂಬೈ: ಮೊಹ್ರಾ’, ‘ದುಲ್ಹೆ ರಾಜ’, ‘ಶೂಲ್’ ಮತ್ತು ಇತರ ಹಲವು ಚಿತ್ರಗಳ ಮೂಲಕ ಚಿತ್ರಪ್ರೇಮಿಗಳ ಮನಗೆದ್ದಿರುವ ಬಾಲಿವುಡ್ ನಟಿ ರವೀನಾ ಟಂಡನ್, ಅವರ ಪುತ್ರಿ ರಶಾ ಥಡಾನಿ ಅವರೊಂದಿಗೆ ಅಭಿಮಾನಿಯೊಬ್ಬ ದುರ್ವರ್ತನೆ ತೋರಿದ್ದಾರೆ. ರಾಷ್ಟ್ರಪತಿ ಅವರಿಂದ ಪದ್ಮಶ್ರಿ ಪ್ರಶಸ್ತಿ ಪಡೆದು ಮಗಳೊಂದಿಗೆ ಮುಂಬೈ ಏರ್ಪೋರ್ಟ್ಗೆ ಬಂದಿಳಿದ ವೇಳೆ ಈ ಘಟನೆ ನಡೆದಿದೆ.
ನೀಲಿ ಬಣ್ಣದ ಉಡುಪಿನಲ್ಲಿದ್ದ ನಟಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಗೆ ಫೋಸ್ ನೀಡಿದರು, ಈ ವೇಳೆ ಆಕೆ ತನ್ನ ಕಾರಿನ ಸಮೀಪ ಬಂದಾಗ ಆಕೆಯ ಚಿತ್ರವನ್ನು ಕ್ಲಿಕ್ಕಿಸಲು ಅಭಿಮಾನಿಯೊಬ್ಬ ಮುನ್ನುಗಿದ. ಈ ವೇಳೆ ಟಂಡನ್ ಅವರ ಪುತ್ರಿಯನ್ನು ತಳ್ಳಿರುವುದಾಗಿ ಆರೋಪಿಸಲಾಗಿದೆ. ಘಟನೆ ಬಳಿಕ ಕೋಪಗೊಂಡ ಅವರು ಆಕೆಯನ್ನು ತಳ್ಳಬೇಡಿ ಎಂದು ಗದರಿದರು. ಅಲ್ಲದೇ ಆತನನ್ನು ಮುಂದಕ್ಕೆ ದೂಡಿದರು. ನಂತರ ನಟಿ ತನ್ನ ಮಗಳೊಂದಿಗೆ ಕಾರಿನಲ್ಲಿ ಕುಳಿತು ವಿಮಾನ ನಿಲ್ದಾಣದಿಂದ ಹೊರಟರು.