ಮುಂಬೈ: ಮುಂಬರುವ ಸ್ಪೋರ್ಟ್ಸ್ ಬಯೋಪಿಕ್ “ಚಕ್ಡಾ ‘ಎಕ್ಸ್ಪ್ರೆಸ್” ನಲ್ಲಿಕಾಣಿಸಿಕೊಳ್ಳಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಮಧ್ಯಪ್ರದೇಶದ ತಮ್ಮ ಬಾಲ್ಯದ ಮನೆಗೆ ಭೇಟಿ ನೀಡಿದರು.
ನಟಿ ಅನುಷ್ಕಾ ನಿವೃತ್ತ ಸೇನಾ ಕರ್ನಲ್ ಅಜಯ್ ಕುಮಾರ್ ಶರ್ಮಾ ಅವರ ಮಗಳು. ಮೊವ್ನಲ್ಲಿರುವ ಸರ್ಕಾರಿ ನಿವಾಸದಲ್ಲಿರುವ ತನ್ನ ಹಳೆಯ ಮನೆಗೆ ಭೇಟಿ ನೀಡಿದ ವೀಡಿಯೊವನ್ನು ನಟಿ ಹಂಚಿಕೊಂಡಿದ್ದಾರೆ.
ಆಕೆ ಈಜು ಕಲಿತ ಪೂಲ್ ಮತ್ತು ತನ್ನ ತಂದೆಯೊಂದಿಗೆ ಸ್ಕೂಟರ್ ಸವಾರಿಯ ಬಗ್ಗೆ ನಟಿ ವಿಚಾರ ಹಂಚಿಕೊಂಡಿದ್ದು, ಹೀಗೆ ಬರೆದಿದ್ದಾರೆ: “MHOW, MP ಗೆ ಪುನಃ ಭೇಟಿ ನೀಡುತ್ತಿದ್ದೇನೆ. ನಾನು ಚಿಕ್ಕವಳಿದ್ದಾಗ ನಾನು ಮೊದಲು ಈಜಲು ಕಲಿತ ಸ್ಥಳ, ನನ್ನ ಜನ್ಮದಿನದಂದು ಸಹೋದರನೊಂದಿಗೆ ಆಟವಾಡಿದ ಕ್ಷಣ. ನನ್ನ ತಂದೆಯೊಂದಿಗೆ ಸ್ಕೂಟರ್ ಸವಾರಿ ಮಾಡಿದ ಸ್ಥಳಗಳನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ವಿಡಿಯೊದಲ್ಲಿ ರಸ್ತೆಯ ಕೊನೆಯಲ್ಲಿ ಇದ್ದ ಮನೆಯನ್ನು ತೋರಿಸಿದ್ದಾರೆ.