Bengaluru 26°C

ಮೊಡಂಕಾಪು ವನದುರ್ಗಾ ಕ್ಷೇತ್ರಕ್ಕೆ ಬಹುಭಾಷಾ ನಟ, ನಿರ್ದೇಶಕ ಉಪೇಂದ್ರ ಭೇಟಿ

ಬಹುಭಾಷಾ ಚಲನಚಿತ್ರ ನಟ ಉಪೇಂದ್ರ ಬಂಟ್ವಾಳ ತಾಲೂಕಿನ ಬಂಟ್ವಾಳ ಮೂಡ ಗ್ರಾಮದ ಮೊಡಂಕಾಪು ಬಳಿಯ ವನದುರ್ಗ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಬಂಟ್ವಾಳ : ಬಹುಭಾಷಾ ಚಲನಚಿತ್ರ ನಟ ಉಪೇಂದ್ರ ಬಂಟ್ವಾಳ ತಾಲೂಕಿನ ಬಂಟ್ವಾಳ ಮೂಡ ಗ್ರಾಮದ ಮೊಡಂಕಾಪು ಬಳಿಯ ವನದುರ್ಗ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಸ್ವತಃ ನಿರ್ದೇಶಿಸಿ ನಟಿಸಿರುವ ಹೊಸ ಚಲನಚಿತ್ರ ‘ಯುಐ’ ಯಶಸ್ವಿಯಾಗಲೆಂದು ವನದುರ್ಗಾ ಕ್ಷೇತ್ರದಲ್ಲಿ ಸರ್ವಾಂಲಂಕಾರ ಸೇವೆ ಸಲ್ಲಿಸಿದರು. ಚಲನಚಿತ್ರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ‘ವೇಲುಹರಿ’ ನವೀನ್ ಮನೋಹರ್ ಅವರ ಜೊತೆಗಿದ್ದರು. ಮೊಡಂಕಾಪು ಕ್ಷೇತ್ರದಲ್ಲಿರುವ ವಿಶೇಷ ಕೆರೆಯ ಬಗ್ಗೆ ರಾಜೇಶ್ ಭಟ್ ಮಾಹಿತಿ ನೀಡಿದರು.


ಮಧ್ಯಾಹ್ನ ಪೂಜೆ ಬಳಿಕ ಕ್ಷೇತ್ರದಲ್ಲಿ ಅನ್ನದಾನ ಪ್ರಸಾದ ಪಡೆದು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಇದೇ ಸಂದರ್ಭ ಮೊಡಂಕಾಪು ವನದುರ್ಗ ಕ್ಷೇತ್ರದ ಗುರುದತ್ ಶೆಣೈ, ಪಾಂಡುರಂಗ ಶೆಣೈ ಉಪಸ್ಥಿತರಿದ್ದರು.


Nk Channel Final 21 09 2023