Bengaluru 28°C
Ad

ಮೊಬೈಲ್ ಆಪ್ 500 ಕೋಟಿ ಹೂಡಿಕೆ ಹಗರಣ : ಭಾರತಿ ಸಿಂಗ್ ಸೇರಿ ಐವರಿಗೆ ಸಮನ್ಸ್

ಮೊಬೈಲ್ ಆಪ್ ಸಂಬಂಧಿತ ಸ್ಕ್ಯಾಮ್‌ನಲ್ಲಿ ನಡೆದ 500 ಕೋಟಿ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖ್ಯಾತ ಮಹಿಳಾ  ಕಾಮಿಡಿಯನ್ ಭಾರತಿ ಸಿಂಗ್ ಹಾಗೂ ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಎಲ್ವೀಸ್ ಯಾದವ್ ಸೇರಿದಂತೆ ಒಟ್ಟು ಐವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕಳುಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಹಿಬಾಕ್ಸ್ಎಂಬ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಹೂಡಿಕೆ ಮಾಡುವಂತೆ  ಅನೇಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಯೂಟ್ಯೂಬರ್‌ಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಹಿಬಾಕ್ಸ್‌ ಬಗ್ಗೆ ಪ್ರಚಾರ ಮಾಡಿ ಜನರನ್ನು ಈ ಆಪ್‌ನಲ್ಲಿ ಹಣ ಹೂಡುವುದಕ್ಕೆ ಪ್ರೇರಣೆ ಮಾಡಿದ್ದಾರೆ ಎಂದು 500ಕ್ಕೂ ಹೆಚ್ಚು ದೂರುಗಳು ಪೊಲೀಸರಿಗೆ ಬಂದಿವೆ ಎಂದು ಅಧಿಕಾರಿ ಹೇಳಿದ್ದಾರೆ.  ಈ ಹಿಬಾಕ್ಸ್ ಮೊಬೈಲ್ ಆಪ್ ಹಗರಣದ ಪ್ರಮುಖ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ  30 ವರ್ಷದ ಶಿವರಾಮ್ ಬಂಧಿತ ಆರೋಪಿ.

ಇತ್ತ ಪೊಲೀಸರಿಗೆ ಬಂದ ದೂರಿನ ಪ್ರಕಾರ, ಯೂಟ್ಯೂಬರ್‌ಗಳು ಹಾಗೂ ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಸೌರವ್ ಜೊಶಿ, ಅಭಿಷೇಕ್ ಮಲ್ಹನ್‌, ಪುರವ್ ಜಾ, ಎಲ್ವೀಸ್ ಯಾದವ್, ಭಾರತಿ ಸಿಂಗ್, ಹರ್ಷ ಲಿಂಬಾಚಿಯಾ, ಲಕ್ಷ್ಯಾ ಚೌಧರಿ, ಆದರ್ಶ್‌ ಸಿಂಗ್‌, ಅಮಿತ್, ಹಾಗೂ ದಿಲ್ರಾಜ್ ಸಿಂಗ್‌ ರಾವತ್‌ ಅವರು ಈ ಹಿಬಾಕ್ಸ್‌ ಅಪ್ಲಿಕೇಷನ್ ಬಗ್ಗೆ ಪ್ರಚಾರ ಮಾಡಿ ಜನರಿಗೆ ಆ ಆಪ್‌ನಲ್ಲಿ ಹಣ ಹೂಡುವಂತೆ ಪ್ರೇರೆಪಿಸಿದ್ದಾರೆ. ಈ ಹಿಬಾಕ್ಸ್ ಒಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದು ಯೋಜನೆ ರೂಪಿಸಿ ಮಾಡಿದ ಹಗರಣದ ಭಾಗವಾಗಿದೆ ಎಂದು ಐಎಫ್‌ಎಸ್‌ಒದ ವಿಶೇಷ ಘಟಕದ ಉಪ ಪೊಲೀಸ್ ಆಯುಕ್ತ ಹೇಮಂತ್ ತಿವಾರಿ ಹೇಳಿದ್ದಾರೆ.

Ad
Ad
Nk Channel Final 21 09 2023