ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರು ಮಾತ್ರವಲ್ಲ ಗಂಡಸರ ಮೇಲೂ ಶೋಷಣೆ ಆಗಿದೆ ಎಂದು ನಟ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ನಟ ಉಪೇಂದ್ರ ಮೀಟೂ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರು ಮಾತ್ರವಲ್ಲ ಗಂಡಸರ ಮೇಲೂ ಶೋಷಣೆ ಆಗಿದೆ.
ಒಂದು ವೇಳೆ ನಾನು ಹುಡುಗಿಯಾಗಿದ್ದರೆ ಇದೆಲ್ಲಾ ಗೊತ್ತಾಗುತ್ತಿತ್ತೇನೋ..! ಇದಕ್ಕೆಲ್ಲಾ ಒಂದು ವೇದಿಕೆ ರೆಡಿ ಆಗಬೇಕು..ಇಂತಹ ವಿಚಾರಗಳನ್ನು ಪ್ರಸ್ತಾಪ ಮಾಡಲು ಒಂದು ವೇದಿಕೆ ಇರಬೇಕು ಎಂದು ಹೇಳಿದರು. ಕೆಲವರಿಗೆ ಚಿತ್ರರಂಗದಲ್ಲಿ ಶೋಷಣೆ ಆಗಿದೆ, ಇದು ಎಲ್ಲಾ ಚಿತ್ರರಂಗದಲ್ಲೂ ನಡೆಯುತ್ತದೆ. ಇಂತಹ ಸಮಸ್ಯೆ ಇದ್ದಾಗ ಅದನ್ನು ಹೇಳಲು ಒಂದು ವೇದಿಕೆ ಇರಬೇಕು ಎಂದು ಅವರು ಹೇಳಿದ್ದಾರೆ.
Ad