ಅನಧಿಕೃತವಾಗಿ ಹಾಡು ಬಳಸಿದಕ್ಕೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಇದೀಗ ಇಳಯರಾಜಗೆ 60 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಳಯರಾಜ ಸಂಗೀತ ಸಂಯೋಜನೆಯ ‘ಕಣ್ಮಣಿ’ ಹಾಡನ್ನು ಬಳಸಿದಕ್ಕೆ ಇದೀಗ ದುಬಾರಿ ಹಣವನ್ನು ದಂಡ ತೆತ್ತಿದ್ದಾರೆ.
‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದಲ್ಲಿ ಅನಧಿಕೃತವಾಗಿ ಹಾಡು ಬಳಸಿದ ಹಿನ್ನೆಲೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಇಳಯರಾಜ ಕೇಳಿದ್ದರು. ಬಳಿಕ ಅವರನ್ನು ಚಿತ್ರದ ನಿರ್ಮಾಪಕರು ವೈಯಕ್ತಿಕವಾಗಿ ಭೇಟಿಯಾಗಿ ಮಾತಕತೆಯ ಬಳಿಕ ಒಪ್ಪಂದದಂತೆ 60 ಲಕ್ಷ ರೂ. ಇಳಯರಾಜಗೆ ಪಾವತಿಸಿದ್ದಾರೆ.
ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ತಂಡ ಅನುಮತಿ ಇಲ್ಲದೇ ಚಿತ್ರದಲ್ಲಿ ಬಳಸಿದ್ದರು. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಇಳಯರಾಜ ನೋಟಿಸ್ ನೀಡಿದ್ದರು.
Ad