ಕೊಚ್ಚಿ: 1993ರಲ್ಲಿ ಬಂದ ಮೋಹನ್ ಲಾಲ್, ಸುರೇಶ್ ಗೋಪಿ ಅಭಿನಯದ ಸಿನಿಮಾ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.1993 ರಲ್ಲಿ ಮಾಲಿವುಡ್ ನಲ್ಲಿ ಬಂದ ಸೈಕಲಾಜಿಕಲ್ ಹಾರಾರ್ ಥ್ರಿಲ್ಲರ್ ʼ ಮಣಿಚಿತ್ರತಾಳ್ʼ ಬಾಕ್ಸ್ ಆಫೀಸ್‌ನಲ್ಲಿ ಅಂದು ಮೋಡಿ ಮಾಡಿತ್ತು. ಇದೀಗ 31 ವರ್ಷದ ಬಳಿಕ ಸಿನಿಮಾ ರೀ- ರಿಲೀಸ್ ಆಗಲಿದೆ.
ಫಾಸಿಲ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಮಾಲಿವುಡ್‌ನಲ್ಲಿ ದೊಡ್ಡ ಹಿಟ್ ಆಗುವುದರ ಜೊತೆಗೆ ಇತರೆ ಭಾಷೆಗೆ ರಿಮೇಕ್ ಆಗಿತ್ತು. ಮೋಹನ್ ಲಾಲ್ , ಶೋಭನಾ, ಸುರೇಶ್ ಗೋಪಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಶೋಭನಾ ʼಗಂಗಾʼ ಪಾತ್ರದಲ್ಲಿ ʼನಾಗವಲ್ಲಿʼಯಾಗಿ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಡಾ.ಸನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
31 ವರ್ಷದ ಬಳಿಕ ʼಮಣಿಚಿತ್ರತಾಳ್ʼ 4K ಡಾಲ್ಬಿ ಅಟ್ಮಾಸ್ ಫಾರ್ಮ್ಯಾಟ್ ನಲ್ಲಿ ರೀ – ರಿಲೀಸ್ ಆಗಲಿದೆ. ಇದೇ ಆಗಸ್ಟ್ 17 ರಂದು ʼಮಣಿಚಿತ್ರತಾಳ್ʼ ತೆರೆ ಕಾಣಲಿದೆ.
Ad