ತಿರುವನಂತಪುರಂ: ಮಲಯಾಳಂ ಖ್ಯಾತ ನಟ ದಿಲೀಪ್ ಶಂಕರ್ ಖಾಸಗಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಘಟನೆ ತಿರುವನಂತಪುರಂನ ವ್ಯಾನ್ರೋಸ್ ಜಂಕ್ಷನ್‌ನಲ್ಲಿ ನಡೆದಿದೆ.
ದೂರದರ್ಶನ ಧಾರಾವಾಹಿಗೆ ಸಂಬಂಧಿಸಿದ ಕೆಲಸಕ್ಕಾಗಿ ದಿಲೀಪ್ ಶಂಕರ್ 4 ದಿನಗಳ ಹಿಂದೆ ಹೋಟೆಲ್‌ಗೆ ಬಂದಿದ್ದರು. ಆದರೆ ಕೆಲ ದಿನಗಳಿಂದ ಹೋಟೆಲ್ ಕೋಣೆಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಸಿಬ್ಬಂದಿ ಅನುಮಾನಗೊಂಡಿದ್ದಾರೆ.
ಇದರ ಜೊತೆಗೆ ಅವರ ಸಹನಟರು ನಟನಿಗೆ ಫೋನ್‌ನಲ್ಲಿ ಕರೆ ಮಾಡಿದರು ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಬಳಿಯಿದ್ದ ಕೀ ಮೂಲಕ ದಿಲೀಪ್ ಶಂಕರ್ ಇದ್ದ ಕೋಣೆಯ ಬಾಗಿಲನ್ನು ತೆಗೆದು ನೋಡಿದಾಗ ದಿಲೀಪ್ ಶಂಕರ್ ಶವ ಪತ್ತೆಯಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ಪ್ರಕರಣ ದಾಖಲಿಸಿ ತನಿಖೆಗೆ ಕೈಗೊಂಡಿದ್ದಾರೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.