Bengaluru 28°C

ಪುಷ್ಪ 2 ಪ್ರೀಮಿಯರ್ ಶೋ ವೇಳೆ ಲಾಟಿ ಚಾರ್ಜ್: ನೂರಕ್ಕೂ ಹೆಚ್ಚು ಮಂದಿಗೆ ಗಾಯ

ಪುಷ್ಪ 2 ಸಿನೆಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಅದಕ್ಕೂ ಮುನ್ನ ಡಿ.4 ರಂದು ಪುಷ್ಪ 2 ತಂಡದವರು ಪ್ರೀಮಿಯರ್ ಶೋವನ್ನು ಆಯೋಜನೆ ಹಲವೆಡೆ ಆಯೋಜನೆ ಮಾಡಲಾಗಿತ್ತು.

ಪುಷ್ಪ 2 ಸಿನೆಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಅದಕ್ಕೂ ಮುನ್ನ ಡಿ.4 ರಂದು ಪುಷ್ಪ 2 ತಂಡದವರು ಪ್ರೀಮಿಯರ್ ಶೋವನ್ನು ಆಯೋಜನೆ ಹಲವೆಡೆ ಆಯೋಜನೆ ಮಾಡಲಾಗಿತ್ತು. ಈ ಶೋಗೆ ನಾಯಕ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಸೇರಿ ಹಲವಾರು ಭಾಗಿಯಾಗಿದ್ದರು.


ಹೈದರಾಬಾದ್ ನ ಸಂಧ್ಯಾ ಥಿಯೇಟರ್‌ನಲ್ಲಿ ನಲ್ಲಿ ಆಯೋಜಿಸಲಾಗಿದ್ದ ಪ್ರೀಮಿಯರ್ ಶೋ ಗೆ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಆಗಮಿಸಿದ್ದರು, ಈ ವೇಳೆ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲೆಂದು ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.


ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಂದ್ರಪ್ರದೇಶದ ಆರ್‌ಟಿಸಿ ಕ್ರಾಸ್ ರಸ್ತೆಯ ಸಂಧ್ಯಾ ಥಿಯೇಟರ್‌ ಕೂಡ ಸಿನೆಮಾ ನೋಡಲು ಬಂದ ಬಂದಾಗ ಚಿತ್ರಮುಂದಿರದ ಮುಂಭಾಗ ಕಾಲ್ತುಳಿತ ಉಂಟಾಗಿದ್ದು, ನೂರಾರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದು, ಈ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.


Nk Channel Final 21 09 2023