ಐಫಾ 2024 ಅವಾರ್ಡ್ಸ್ ಅಬು ಧಾಬಿಯಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 27ಕ್ಕೆ ಐಫಾ 2024 ಆರಂಭವಾಗಿದ್ದು ಸೆಪ್ಟೆಂಬರ್ 29ಕ್ಕೆ ಕಾರ್ಯಕ್ರಮ ಮುಗಿಯಲಿದೆ. ಬಾಲಿವುಡ್, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ದೊಡ್ಡ ಸಂಖ್ಯೆಯ ಸ್ಟಾರ್ ನಟ-ನಟಿಯರು ಐಫಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಪ್ರಶಸ್ತಿ ಪಡೆದ ತೆಲುಗು ಸಿನಿಮಾಗಳು
ಅತ್ಯುತ್ತಮ ಸಿನಿಮಾ: ದಸರಾ
ಅತ್ಯುತ್ತಮ ನಿರ್ದೇಶಕ: ಅನಿಲ್ ರವಿಪುಡಿ (ಭಗವಂತ ಕೇಸರಿ)
ಅತ್ಯುತ್ತಮ ನಟಿ: ಮೃಣಾಲ್ ಠಾಕೂರ್ (ಹೈ ನಾನ್ನ)
ಅತ್ಯುತ್ತಮ ನಟ: ನಾನಿ (ದಸರಾ)
ಅತ್ಯುತ್ತಮ ಪೋಷಕ ನಟಿ: ವರಲಕ್ಷ್ಮಿ ಶರತ್ಕುಮಾರ್ (ವೀರ ಸಿಂಹ ರೆಡ್ಡಿ)
ಅತ್ಯುತ್ತಮ ಪೋಷಕ ನಟ: ಬ್ರಹ್ಮಾನಂದಂ (ರಂಗ ಮಾರ್ತಾಂಡ)
ಅತ್ಯುತ್ತಮ ವಿಲನ್: ಶೈನ್ ಟಾಮ್ ಚಾಕೊ (ದಸರಾ)
ಅತ್ಯುತ್ತಮ ಸಂಗೀತ: ಹಶೀಮ್ ಅಬ್ದುಲ್ ವಹಾಬ್ (ಹೈ ನಾನ್ನ)
ಅತ್ಯುತ್ತಮ ಸಾಹಿತ್ಯ: ಅನಂತ ಶ್ರೀರಾಮ್ (ಬೇಬಿ)
ಅತ್ಯುತ್ತಮ ಗಾಯಕ: ರಾಹುಲ್ ಸಿಪ್ಲಿಗಂಜ್ (ಮೇಮ್ ಫೇಮಸ್)
ಅತ್ಯುತ್ತಮ ಗಾಯಕಿ: ಮಂಗ್ಲಿ (ಬಲಗಂ)
ಪ್ರಶಸ್ತಿ ಪಡೆದ ತಮಿಳು ಸಿನಿಮಾಗಳು
ಅತ್ಯುತ್ತಮ ಸಿನಿಮಾ: ಜೈಲರ್
ಅತ್ಯುತ್ತಮ ನಿರ್ದೇಶಕ: ಮಣಿರತ್ನಂ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ನಟಿ: ಐಶ್ವರ್ಯಾ ರೈ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ನಟ: ವಿಕ್ರಂ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ಪೋಷಕ ನಟಿ: ಸಹಸ್ರ ಶ್ರೀ (ಚಿತ್ತ)
ಅತ್ಯುತ್ತಮ ಪೋಷಕ ನಟ: ಜಯರಾಂ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ವಿಲನ್: ಎಸ್ಜೆ ಸೂರ್ಯ (ಮಾರ್ಕ್ ಆಂಟೊನಿ)
ಅತ್ಯುತ್ತಮ ಸಂಗೀತ: ಎಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ಸಾಹಿತ್ಯ: ಸೂಪರ್ ಸುಬ್ಬು (ಜೈಲರ್-ಹುಕುಂ)
ಅತ್ಯುತ್ತಮ ಗಾಯಕ: ಹರಿಚರಣ್ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ಗಾಯಕಿ: ಶಕ್ತಿಶ್ರೀ ಗೋಪಾಲನ್ (ಪೊನ್ನಿಯಿನ್ ಸೆಲ್ವನ್ 2)
ಪ್ರಶಸ್ತಿ ಗೆದ್ದ ಮಲಯಾಳಂ ಸಿನಿಮಾಗಳು
ಅತ್ಯುತ್ತಮ ಸಿನಿಮಾ: 2018: ಎವರಿ ಒನ್ ಇಸ್ ಎ ಹೀರೋ
ಅತ್ಯುತ್ತಮ ನಿರ್ದೇಶಕ: ಜಿಯೋ ಬೇಬಿ (ಕಾತಲ್: ದಿ ಕೋರ್)
ಅತ್ಯುತ್ತಮ ನಟಿ: ಅನಸ್ವರ ರಾಜನ್ (ನೇರು)
ಅತ್ಯುತ್ತಮ ನಟ: ಟೊವಿನೊ ಥಾಮಸ್ (2018)
ಅತ್ಯುತ್ತಮ ಪೋಷಕ ನಟಿ: ಮಮತಾ ಬೈಜು (ಪ್ರಣಯ ವಿಲಾಸಂ)
ಅತ್ಯುತ್ತಮ ಪೋಷಕ ನಟ: ಸುಧಿ ಕೋಳಿಕೋಡ್ (ಕಾತಲ್)
ಅತ್ಯುತ್ತಮ ವಿಲನ್: ಅರ್ಜುನ್ ರಾಧಾಕೃಷ್ಣನ್ (ಕಣ್ಣೂರು ಸ್ಕ್ವಾಡ್)
ಅತ್ಯುತ್ತಮ ಸಂಗೀತ: ಸುಶಿನ್ ಶ್ಯಾಮ್ (ರೋಮಾಂಚನಂ)
ಅತ್ಯುತ್ತಮ ಸಾಹಿತ್ಯ: ಜಿಯೋ ಪೌಲ್ (2018)
ಅತ್ಯುತ್ತಮ ಗಾಯಕ: ಸುಶೀನ್ ಶ್ಯಾಮ್ (ರೋಮಾಂಚನಂ)
ಅತ್ಯುತ್ತಮ ಗಾಯಕಿ: ಎಜ್ಮಾ ನೋಬಿನ್ (2018)