Bengaluru 27°C
Ad

97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

ಸಿಂಪಲ್‌ ಸ್ಟೋರಿಯೊಂದಿಗೆ ಬಂದ ಬಾಲಿವುಡ್‌ನ ‘ಲಾಪತಾ ಲೇಡೀಸ್’ ಸಿನಿಮಾ 2025ರ ಆಸ್ಕರ್ ಗೆ  ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ. 97ನೇ ಆಸ್ಕರ್‌ ಪ್ರಶಸ್ತಿಗಾಗಿ ಭಾರತದಿಂದ ಕಿರಣ್‌ ರಾವ್‌ ನಿರ್ದೇಶನದ  ‘ಲಾಪತಾ ಲೇಡೀಸ್’ ಅಧಿಕೃತವಾಗಿ ಪ್ರವೇಶ ಪಡೆದಿದೆ ಎಂದು ಸೋಮವಾರ (ಸೆ.23ರಂದು) ಚೆನ್ನೈನಲ್ಲಿ ಸುದ್ದಿಗೋಷ್ಟಿ ನಡೆಸಿ ಫಿಲಂ ಫೆಡರೇಶನ್‌ ಆಫ್ ಇಂಡಿಯಾ  ಹೇಳಿದೆ.

ಮುಂಬಯಿ: ಸಿಂಪಲ್‌ ಸ್ಟೋರಿಯೊಂದಿಗೆ ಬಂದ ಬಾಲಿವುಡ್‌ನ ‘ಲಾಪತಾ ಲೇಡೀಸ್’ ಸಿನಿಮಾ 2025ರ ಆಸ್ಕರ್ ಗೆ  ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ. 97ನೇ ಆಸ್ಕರ್‌ ಪ್ರಶಸ್ತಿಗಾಗಿ ಭಾರತದಿಂದ ಕಿರಣ್‌ ರಾವ್‌ ನಿರ್ದೇಶನದ  ‘ಲಾಪತಾ ಲೇಡೀಸ್’ ಅಧಿಕೃತವಾಗಿ ಪ್ರವೇಶ ಪಡೆದಿದೆ ಎಂದು ಸೋಮವಾರ (ಸೆ.23ರಂದು) ಚೆನ್ನೈನಲ್ಲಿ ಸುದ್ದಿಗೋಷ್ಟಿ ನಡೆಸಿ ಫಿಲಂ ಫೆಡರೇಶನ್‌ ಆಫ್ ಇಂಡಿಯಾ  ಹೇಳಿದೆ.

ʼಅನಿಮಲ್‌ʼ, ʼಚಂದು ಚಾಂಪಿಯನ್ʼ, ʼಕಲ್ಕಿ 2898 ADʼ, ʼಹನುಮಾನ್‌ʼ, ʼತಂಗಲಾನ್‌ʼ, ʼಅರ್ಟಿಕಲ್‌ 370ʼ, ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ʼಆಟಂ, ʼಆಡುಜೀವಿತಂʼ ರಾಜ್‌ಕುಮಾರ್ ರಾವ್ ಅವರ ʼಶ್ರೀಕಾಂತ್ʼ ಮತ್ತು ವಿಕ್ಕಿ ಕೌಶಲ್ ಅವರ  ಸ್ಯಾಮ್ ಬಹದ್ದೂರ್ʼ ಸೇರಿದಂತೆ ಒಟ್ಟು 12 ಹಿಂದಿ ಚಿತ್ರಗಳು, 6 ತಮಿಳು ಮತ್ತು 4 ಮಲಯಾಳಂ ಚಿತ್ರಗಳನ್ನು ನೋಡಿ ಅವುಗಳಲ್ಲಿ ʼಲಾಪತಾ ಲೇಡೀಸ್‌ʼ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಫಿಲಂ ಫೆಡರೇಶನ್‌ ಆಫ್ ಇಂಡಿಯಾ  ಹೇಳಿದೆ.

ಈ ವರ್ಷ 13 ಸದಸ್ಯರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಜಾನು ಬರುವಾ ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದರು. ಒಟ್ಟು 29 ಸಿನಿಮಾಗಳನ್ನು ವೀಕ್ಷಿಸಿ ʼಲಾಪತಾ ಲೇಡೀಸ್‌ʼ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ವಿದೇಶಿ ಸಿನಿಮಾದ ವಿಭಾಗಕ್ಕೆ ಚಿತ್ರ ಪ್ರವೇಶ ಪಡೆದಿದೆ.

 

 

Ad
Ad
Nk Channel Final 21 09 2023