ಬೆಂಗಳೂರು: ಕನ್ನಡದ ಖ್ಯಾತ ತಾರೆಯರಾದ ಚಂದನ್ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಿನ್ನು ಕವಿತಾ ಗೌಡ ಮತ್ತು ಚಂದನ್ ಕುಮಾರ್ ಮಗ ಹುಟ್ಟಿದ ಖುಷಿಯಲ್ಲಿ, ಮಗನ ಕಾಲಿನ ವಿಡಿಯೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಸುಂದರ ವಿಡಿಯೋದಲ್ಲಿ “ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇತ್ತೀಚಿಗೆ ಕವಿತಾ ಗೌಡ ಸೀಮಂತ ಕೂಡ ಸಂಭ್ರಮದಿಂದ ನಡೆದಿತ್ತು. ಈಗ ಕವಿತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಖುಷಿಯಲ್ಲಿ ವಿಶೇಷ ವಿಡಿಯೋ ಮಾಡಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ ಚಂದನ್ ಕುಮಾರ್. ಇನ್ನು ಅಮ್ಮ-ಮಗ ಇಬ್ಬರೂ ಚೆನ್ನಾಗಿದ್ದಾರೆ ಎಂದೂ ಸಹ ಮಾಹಿತಿ ನೀಡಿದ್ದಾರೆ.
Ad