Bengaluru 29°C
Ad

ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ ಆಧಾರಿತ ಚಿತ್ರ ‘ಚಿಲ್ಲಿ ಚಿಕನ್​’ ಟ್ರೈಲರ್‌ ಔಟ್‌

ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ ಆಧಾರಿತ ಚಿತ್ರ ‘ಚಿಲ್ಲಿ ಚಿಕನ್​’ ಟ್ರೈಲರ್‌ ಬಿಡುಗಡೆಗೊಂಡಿದೆ. ಹೋಟೆಲ್ ಕೆಲಸ ಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ಅವರು ನಿರ್ದೇಶಿಸಿರುವ ಚಿತ್ರ `ಚಿಲ್ಲಿ ಚಿಕನ್’. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು.

ಬೆಂಗಳೂರು: ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ ಆಧಾರಿತ ಚಿತ್ರ ‘ಚಿಲ್ಲಿ ಚಿಕನ್​’ ಟ್ರೈಲರ್‌ ಬಿಡುಗಡೆಗೊಂಡಿದೆ. ಹೋಟೆಲ್ ಕೆಲಸ ಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ಅವರು ನಿರ್ದೇಶಿಸಿರುವ ಚಿತ್ರ `ಚಿಲ್ಲಿ ಚಿಕನ್’. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು.

ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎಂಬುದೇ ಒನ್ ಲೈನ್ ಕಥೆ. ಇದು ಬೆಂಗಳೂರಿನಲ್ಲಿ ನಡೆದ ನೈಜ ಘಟಕ ಆಧಾರಿತ ಸಿನಿಮಾ ಎಂಬುದು ವಿಶೇಷ. ಕಳೆದ ತಿಂಗಳು ಟೀಸರ್ ಬಿಡುಗಡೆ ಮಾಡಿದ್ದ ಈ ಚಿತ್ರತಂಡ ಇದೀಗ ಟ್ರೈಲರ್‌ ಹೊರತಂದಿದೆ.

ನಿರ್ದೇಶಕ ಪ್ರತೀಕ್ ಪ್ರಜೋಶ್. ಮಾತನಾಡಿ ʻʻಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ರಿಲೀಸಾಗಲಿದೆ. ನಿಮ್ಮಗಳ ಸಹಕಾರವಿರಲಿ ಎಂದಷ್ಟೇ ಹೇಳಿದರು. ಈ ಚಿತ್ರದ ನಾಯಕನಾಗಿ ಬಿ.ವಿ. ಶೃಂಗಾ ಅಭಿನಯಿಸಿದ್ದು, ಪಾತ್ರದ ಬಗ್ಗೆ ಮಾಹಿತಿ ನೀಡುವ ಅವರು ‘ನಾವೆಲ್ಲಾ ಇಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, ನಿಮ್ಮಗಳ ಸಹಕಾರ ಬೇಕು ಎಂದಿದ್ದಾರೆ.

Ad
Ad
Nk Channel Final 21 09 2023
Ad