ಮುಂಬೈ: ಕಂಗನಾ ರಣಾವತ್ ಅವರು ಈಗ ಕೇವಲ ನಟಿ ಮಾತ್ರವಲ್ಲ, ಸಂಸದೆ ಕೂಡ ಹೌದು. ಅವರು ಸಿನಿಮಾ ಹಾಗೂ ರಾಜಕೀಯ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಇದ್ದಾರೆ. ಹೀಗಿರುವಾಗಲೇ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಬಂಗಲೆಯನ್ನು 32 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಕಂಗನಾ ಅವರು ಬಾಂದ್ರಾದ ಪಾಲಿ ಹಿಲ್ ಭಾಗದಲ್ಲಿ 32 ಕೋಟಿ ರೂಪಾಯಿ ಮನೆ ಹೊಂದಿದ್ದರು. ಈ ವ್ಯವಹಾರ ಸೆಪ್ಟೆಂಬರ್ 5ರಂದು ಫೈನಲ್ ಆಗಿದೆ. ಇದನ್ನು ಕಂಗನಾ ಅವರು 2017ರಲ್ಲಿ 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು.
ಶ್ವೇತಾ ಭತಿಜಾ ಎಂಬುವವರು ಈ ಕಟ್ಟಡವನ್ನು ಖರೀದಿ ಮಾಡಿದ್ದಾರೆ. ತಮಿಳು ನಾಡು ಮೂಲದ ಇವರು 1.92 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿಲ್ಲ. ಇದು ಕಂಗನಾ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣದಿಂದಲೇ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡಲಾಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಮಂಡಳಿ ಇದನ್ನು ಅಧಿಕೃತವಾಗಿ ಹೇಳಿಲ್ಲ.