ದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ ಪೋಗಾಟ್ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಕ್ಯೂಬಾದ ಕುಸ್ತಿಪಟು ಯಸ್ನೆಲಿಸ್ ಗುಜ್ಮನ್ ಸೋಲಿಸಿ ಫೈನಲ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಫೋಗಾಟ್ ಸಾಧನೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.
ವಿನೇಶ್ ಫೋಗಟ್ ಫೈನಲ್ ಪ್ರವೇಶದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಕಂಗನಾ ರಣಾವತ್, ಭಾರತಕ್ಕೆ ಮೊದಲ ಚಿನ್ನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ವಿನೇಶ್ ಫೋಗಟ್ ಒಮ್ಮೆ ಚಳವಳಿಯಲ್ಲಿ ಭಾವಹಿಸಿದ್ದರು. ಈ ವೇಳೆ ಅವರು ಮೋದಿ ನಿಮ್ಮ ಸಮಾಧಿಯನ್ನೂ ಅಗೆಯುತ್ತಾರೆ ಎಂದು ಹೇಳಿದ್ದರು. ಅದರ ಹೊರತಾಗಿಯೂ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳನ್ನು ಪಡೆದರು. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಉತ್ತಮ ನಾಯಕ ಎಂದು ಬೆರೆದುಕೊಂಡಿದ್ದಾರೆ.
ಇನ್ನು 29 ವರ್ಷದ ಕುಸ್ತಿಪಟು ವಿನೇಶ್ ಫೋಗಟ್ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಶರಣ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಇದರ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ವಿನೇಶ್ ಫೋಗಟ್ ದೀರ್ಘಕಾಲದವರೆಗೆ ಕುಸ್ತಿಯಿಂದ ದೂರ ಉಳಿದಿದ್ದರು