ಮುಂಬಯಿ: ನಟಿ ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ʼಎಮರ್ಜೆನ್ಸಿʼ ಸಿನಿಮಾದ ಟ್ರೇಲರ್ ಬುಧವಾರ(ಆ.14ರಂದು) ರಿಲೀಸ್ ಆಗಿದೆ.ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ನಟಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಮಣಿಕರ್ಣಿಕಾʼ ಚಿತ್ರದ ಬಳಿಕ ಕಂಗನಾ ನಿರ್ದೇಶನದ ಎರಡನೇ ಚಿತ್ರ ʼಎಮರ್ಜೆನ್ಸಿʼ ಆಗಿದ್ದು, ಈಗಾಗಲೇ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಇದೀಗ ಟ್ರೇಲರ್ ರಿಲೀಸ್ ಮಾಡಲಾಗಿದೆ.
ಭಾರತದ ತುರ್ತು ಪರಿಸ್ಥಿತಿಯ ದಿನಗಳು, ಅದರ ಹಿಂದಿನ ರಾಜಕೀಯ ಕಿತ್ತಾಟ, ಅಧಿಕಾರಕ್ಕಾಗಿ ನಡೆಯುವ ತಂತ್ರ ಇದೆಲ್ಲವನ್ನೂ ಟ್ರೇಲರ್ ನಲ್ಲಿ ತೋರಿಸಲಾಗಿದೆ. ಆ ಕಾಲದಲ್ಲಿದ್ದ ರಾಜಕೀಯ ವ್ಯವಸ್ಥೆಯನ್ನೂ ತೋರಿಸಲಾಗಿದೆ.ಭಾರತವೇ ಇಂದಿರಾ & ಇಂದಿರಾ ಭಾರತವೇ!!! ದೇಶದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ, ಇತಿಹಾಸದಲ್ಲಿ ಅವಳು ಬರೆದ ಕರಾಳ ಅಧ್ಯಾಯ! ಎಂದು ಟ್ರೇಲರ್‌ನ್ನು ಕಂಗನಾ ಹಂಚಿಕೊಂಡಿದ್ದಾರೆ.ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್ ಅವರ ಪಾತ್ರಗಳು ಗಮನ ಸೆಳೆಯುತ್ತದೆ. ಕಂಗನಾ ಇಂದಿರಾ ಗಾಂಧಿಯ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.ಇದೇ ವರ್ಷದ ಸೆಪ್ಟೆಂಬರ್ 6ರಂದು ಸಿನಿಮಾ ರಿಲೀಸ್ ಆಗಲಿದೆ.
INDIA is INDIRA & INDIRA is INDIA!!!
The Most Powerful Woman In The History of the country,
The Darkest Chapter She Wrote in its History!
Witness ambition collide with tyranny. #EmergencyTrailer Out Now!#KanganaRanaut’s #Emergency Unfolds In cinemas worldwide on 6th September… pic.twitter.com/6RYUQpadfk— Kangana Ranaut (@KanganaTeam) August 14, 2024