Bengaluru 21°C
Ad

ಚುನಾವಣೆ ಗೆದ್ದ ಕಲ್ಯಾಣ್​ಗೆ ಅಣ್ಣ ಚಿರಂಜೀವಿ ಮನೆಯಲ್ಲಿ ಅದ್ದೂರಿ ಸ್ವಾಗತ

ಟಾಲಿವುಡ್​ ನಟ ಪವನ್ ಕಲ್ಯಾಣ್​ ಅವರು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

ಟಾಲಿವುಡ್​ ನಟ ಪವನ್ ಕಲ್ಯಾಣ್​ ಅವರು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಪವನ್​ ಕಲ್ಯಾಣ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಪವನ್​ ಕಲ್ಯಾಣ್​ ಅವರು ಹೈದರಾಬಾದ್​ಗೆ ಮರಳಿದ್ದಾರೆ. ನಂತರ ಅವರು ಸಹೋದರ ಮೆಗಾ ಸ್ಟಾರ್​ ಚಿರಂಜೀವಿ ನಿವಾಸಕ್ಕೆ ತೆರಳಿದ್ದಾರೆ. ನಂತರ ಅಣ್ಣ ತಮ್ಮನಿಗೆ ಅದ್ಧೂರಿ ಸ್ವಾಗತದ ಮೂಲಕ ಸ್ವಾಗತಿಸಿದ್ದು ತಮ್ಮನನ್ನು ಕಂಡು ಕಣ್ಣು ತುಂಬಿಕೊಂಡಿದ್ದಾರೆ.

ಆರತಿ ಎತ್ತಿ, ತಿಲಕ ಇಟ್ಟು ಪವನ್​ ಕಲ್ಯಾಣ್​ ಅವರನ್ನು ಬರಮಾಡಿಕೊಳ್ಳಲಾಗಿದೆ. ಅಣ್ಣನ ಕಾಲಿಗೆ ನಮಸ್ಕರಿಸಿದ ಪವನ್​ ಕಲ್ಯಾಣ್​ ಅವರು ಆಶೀರ್ವಾದ ಪಡೆದಿದ್ದಾರೆ. ಇಡೀ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ರಾಮ್​ ಚರಣ್​ ಕೂಡ ಪವನ್​ ಕಲ್ಯಾಣ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದ ವಿಡಿಯೋ ಲಭ್ಯವಾಗಿದೆ.

Ad
Ad
Nk Channel Final 21 09 2023
Ad