Bengaluru 23°C
Ad

ಜೂನ್ 10ರಂದು ‘ಕಲ್ಕಿ 2898 ಎಡಿ’ ಚಿತ್ರದ ಟ್ರೇಲರ್ ರಿಲೀಸ್

‘ಕಲ್ಕಿ 2898 ಎಡಿ’ ಸಿನಿಮಾದ ಟ್ರೇಲರ್​ ಜೂನ್ 10ರಂದು ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ಚಿತ್ರದ ಪಾತ್ರಗಳ ಬಗ್ಗೆ ತಂಡ ಮಾಹಿತಿ ನೀಡಿದ್ದು,. ಈ ಚಿತ್ರದ ಕಥೆ ಹೇಗಿರುತ್ತದೆ ಎನ್ನುವ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ವಿವರಿಸಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಟ್ರೇಲರ್​ ಜೂನ್ 10ರಂದು ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ಚಿತ್ರದ ಪಾತ್ರಗಳ ಬಗ್ಗೆ ತಂಡ ಮಾಹಿತಿ ನೀಡಿದ್ದು,. ಈ ಚಿತ್ರದ ಕಥೆ ಹೇಗಿರುತ್ತದೆ ಎನ್ನುವ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ವಿವರಿಸಿದ್ದಾರೆ.

ಈ ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕು ಎಂದರೆ ಟ್ರೇಲರ್ ರಿಲೀಸ್ ಆಗಬೇಕು ಎಂದರು. ‘ಕಲ್ಕಿ 2898 ಎಡಿ’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಇಷ್ಟು ದಿನ ಚುನಾವಣೆ ಇದ್ದ ಕಾರಣ ತಂಡ ನಿಧಾನಗತಿಯಲ್ಲಿ ಪ್ರಚಾರ ಮಾಡುತ್ತಿತ್ತು.

ಈಗ ಚುನಾವಣೆ ಮುಗಿದು, ಫಲಿತಾಂಶ ಕೂಡ ಹೊರ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ರಚನೆ ಆಗಲಿದೆ ಎನ್ನಲಾಗಿದೆ. ಹೀಗಾಗಿ, ಪ್ರಮೋಷನ್​ನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ.

‘ಕಲ್ಕಿ 2898 ಎಡಿ’ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೋಸ್ಟರ್​ನಲ್ಲಿ ಪ್ರಭಾಸ್ ಅವರು ಕೈಗಾರಿಕಾ ಪ್ರದೇಶದ ಮಧ್ಯೆ ನಿಂತಿದ್ದಾರೆ. ಹಿಂಭಾಗದಲ್ಲಿ ದೊಡ್ಡ ದೊಡ್ಡ ಮಷಿನ್​ಗಳು ಕಂಡು ಬಂದಿವೆ. ಅವರು ಸೂಪರ್ ಹೀರೋ ರೀತಿ ಕಾಣಿಸಿದ್ದಾರೆ. ‘ಎಲ್ಲವೂ ಬದಲಾಗುವ ಸನಿಹದಲ್ಲಿದೆ’ ಎಂದು ಬರೆಯಲಾಗಿದೆ. ಜೂನ್ 10ಕ್ಕೆ ಟ್ರೇಲರ್ ಎಂದು ತಂಡ ಮಾಹಿತಿ ನೀಡಿದೆ.

ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಕೂಡ ಇದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ನಿರ್ಮಾಣ ಮಾಡಿದ್ದಾರೆ.

Ad
Ad
Nk Channel Final 21 09 2023
Ad