Bengaluru 22°C
Ad

ರೇವ್ ಪಾರ್ಟಿ ಕೇಸ್ ​: ಜೂ.14ರವರೆಗೆ ಹೇಮಾಗೆ ನ್ಯಾಯಾಂಗ ಬಂಧನ

ರೇವ್‌ ಪಾರ್ಟಿ ಕೇಸ್‌ಗೆ ಸಂಬಂಧಿಸಿದಂತೆ ಈ ಆರೋಪದಲ್ಲಿ ಆರೋಪದಲ್ಲಿ ಸಿಕ್ಕಿಬಿದ್ದಿರುವ ತೆಲುಗು ನಟಿ ಹೇಮಾ ಅವರನ್ನು ಇಂದು (ಜೂನ್​ 3) ಸಿಸಿಬಿ ಪೊಲೀಸರು ಬಂಧಿಸಿದ್ದರು. ಆನೇಕಲ್​​ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್​ಸಿ ನ್ಯಾಯಾಲಯದ ಜಡ್ಜ್​ ಸಲ್ಮಾ ಎ.ಎಸ್. ಎದುರು ಹೇಮಾರನ್ನು ಹಾಜರುಪಡಿಸಲಾಗಿತ್ತು

ರೇವ್‌ ಪಾರ್ಟಿ ಕೇಸ್‌ಗೆ ಸಂಬಂಧಿಸಿದಂತೆ ಈ ಆರೋಪದಲ್ಲಿ ಆರೋಪದಲ್ಲಿ ಸಿಕ್ಕಿಬಿದ್ದಿರುವ ತೆಲುಗು ನಟಿ ಹೇಮಾ ಅವರನ್ನು ಇಂದು (ಜೂನ್​ 3) ಸಿಸಿಬಿ ಪೊಲೀಸರು ಬಂಧಿಸಿದ್ದರು. ಆನೇಕಲ್​​ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್​ಸಿ ನ್ಯಾಯಾಲಯದ ಜಡ್ಜ್​ ಸಲ್ಮಾ ಎ.ಎಸ್. ಎದುರು ಹೇಮಾರನ್ನು ಹಾಜರುಪಡಿಸಲಾಗಿತ್ತು.

ನಟಿಗೆ ಜೂನ್ 14ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದು ಎಲೆಕ್ಟ್ರಾನಿಕ್​ ಸಿಟಿಯ ಜೆ.ಆರ್​. ಫಾರ್ಮ್​ಹೌಸ್​ನಲ್ಲಿ ರೇವ್​ ಪಾರ್ಟಿ ಮಾಡಿದ ಆರೋಪ ಹೇಮಾ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದಾರೆ.

ಪಾರ್ಟಿ ನಡೆದ ಸ್ಥಳದಲ್ಲಿ ಹೇಮಾ ಇದ್ದರು ಎಂಬುದನ್ನು ಬೆಂಗಳೂರು ಪೊಲೀಸರು ಖಚಿತ ಪಡಿಸಿದ್ದಾರೆ. ಆದರೆ ತಾನು ಅಲ್ಲಿ ಇರಲೇ ಇಲ್ಲ ಎಂದು ಹೇಮಾ ವಾದಿಸುತ್ತಲೇ ಬರುತ್ತಿದ್ದಾರೆ. ಇಂದು ಕೂಡ ಅವರು ಅದೇ ಮಾತನ್ನು ಹೇಳಿದ್ದಾರೆ. ಮಾಧ್ಯಮಗಳ ಎದುರು ಕೂಗಾಡಿದ್ದಾರೆ.

Ad
Ad
Nk Channel Final 21 09 2023
Ad