ವಾಷಿಂಗ್ಟನ್: ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್ (93) ಅವರು ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದ ಜೋನ್ಸ್ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಹಾಯಕ ಬ್ಯಾರಿ ಮ್ಯಾಕ್‌ಫರ್ಸನ್ ಹೇಳಿದ್ದಾರೆ.
ಜೋನ್ಸ್ ನಿಧನ ಕುರಿತು ಅವರ ಮಗ ಹ್ಯಾಮಿಲ್ ‘ಎಕ್ಸ್’ನಲ್ಲಿ ‘#RIP ಡ್ಯಾಡ್’ ಎಂದು ಹೃದಯದ ಎಮೋಜಿ ಬಳಸಿ ಪೋಸ್ಟ್ ಮಾಡಿದ್ದಾರೆ. ಜೇಮ್ಸ್ ಎರ್ಲ್ ಜೋನ್ಸ್ ಅವರು ‘ದಿ ಲಯನ್ ಕಿಂಗ್’, ‘ಸ್ಟಾರ್ ವಾರ್ಸ್’ ಸೇರಿದಂತೆ ಹಲವು ಖ್ಯಾತ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಂಡುವುದರ ಜತೆಗೆ ರಂಗಭೂಮಿ ಕಲಾವಿದರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು 1977ರಲ್ಲಿ ‘ಗ್ರೇಟ್ ಅಮೇರಿಕನ್ ಡಾಕ್ಯುಮೆಂಟ್ಸ್’ ಎಂಬ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು. 2011ರಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು.
#RIP dad 💔 https://t.co/YXpFoBb2Ua
— Mark Hamill (@MarkHamill) September 9, 2024