Bengaluru 28°C

ಡಿ. 29 ರಂದು ಮೈಸೂರಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್

ಡಿ. 29 ರಂದು ಮೈಸೂರಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್

ಮೈಸೂರು: ಮೈಸೂರಿನ ಜೆ.ಕೆ. ಮೈದಾನದಲ್ಲಿ ಡಿ.29 ರಂದು ಬೆಳಗ್ಗೆ 9 ರಿಂದ ರಾತ್ರಿ 10ರವರೆಗೂ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್- 2024 ಮತ್ತು ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಚಿತ್ರಸಂತೆಯ ಪ್ರಚಾರದ ಪೋಸ್ಟರ್ ಬಿಡುಗಡೆಯನ್ನು ಸ್ಯಾಂಡಲ್ ವುಡ್ ನ ನಟ ಮತ್ತು ರಂಗಭೂಮಿ ಕಲಾವಿದ ಡಾಲಿ ಧನಂಜಯ ಬಿಡುಗಡೆಗೊಳಿಸಿ ಶುಭ ಹಾರೈಸಿದರಲ್ಲದೆ, ಚಿತ್ರ ಸಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವುದು ಹರ್ಷ ತಂದಿದ್ದು, ಕಲಾಭಿಮಾನಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.


ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕರಾದ ರಂಜಿತಾ ಸುಬ್ರಮಣ್ಯ ಮಾತನಾಡಿ ಕಳೆದ 4 ವರ್ಷದಿಂದ ಸಿನಿ ಸಂತೆ ಆಯೋಜಿಸುತ್ತಾ ಬಂದಿದ್ದು, ನೀವು ನಿಮ್ಮ ಪ್ರಾಜೆಕ್ಟ್ ಗಾಗಿ ಉತ್ಸಾಹದಿಂದಿರುವ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಾ? ಮೈಸೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವ ಮತ್ತು ಸಿನಿ ಸಂತೆ ಫಿಲ್ಮ್ ಕಾರ್ನಿವಲ್ ನಲ್ಲಿ ಪ್ರೇಕ್ಷಕರೊಂದಿಗೆ ನೇರವಾಗಿ ಸಂಪರ್ಕಿಸಿ ನಿಮ್ಮ ಮುದ್ರೆಯನ್ನು ಮೂಡಿಸುವ ಅವಕಾಶ ಇಲ್ಲಿದೆ ಎಂದು ಹೇಳಿದರು.


ಈ ವಿಶಿಷ್ಟ ವೇದಿಕೆ, ನಿಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಮತ್ತು ಚಲನಚಿತ್ರ ಪ್ರೇಮಿಗಳ, ಪ್ರಭಾವಶಾಲಿಗಳ ಮತ್ತು ಉದ್ಯಮ ವೃತ್ತಿಪರರ ಮುಂದೆ ನಿಮ್ಮ ಪ್ರಾಜೆಕ್ಟ್ ಅನ್ನು ಪ್ರಚಾರ ಮಾಡಲು ಸಹಾಯ ಮಾಡುತ್ತದೆ. ಈ ವರ್ಷ ವಿಶೇಷವಾಗಿ ಸಾರ್ವಜನಿಕರಿಗೆ ಗಾಯನ ಸ್ಪರ್ಧೆ, ಮಕ್ಕಳಿಗೆ ಅಲಂಕಾರಿಕ ಹುಡುಗಿ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಿದ್ದು ಪ್ರತಿ ವಿಭಾಗದ ಮೂರು ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.


ಹಾಗೂ ಸಿನಿ ಸಂತೆಯಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಹೆಚ್ಚಿನ ಮಾಹಿತಿಗಾಗಿ 6360959871/6364632425 ನಂಬರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಸಂಪರ್ಕಾಧಿಕಾರಿ ಶಂಕರ್ ಎಸ್‌ಎನ್, ಉದ್ಯಮಿ ಗಗನ್ ದೀಪ್, ಸಿನಿ ಸಂತೆ ನಿರ್ದೇಶಕಿ ಮತ್ತು ಸಂಸ್ಥಾಪಕಿ ಸಂಧ್ಯಾ ರಾಣಿ, ಐಶ್ವರ್ಯ ಜಿ ಪ್ರಸಾದ್, ಹರ್ಷ, ರೂಪ ಹಾಗೂ ಇನ್ನಿತರರು ಹಾಜರಿದ್ದರು


Nk Channel Final 21 09 2023