Bengaluru 23°C
Ad

ಬಾಲಿವುಡ್‌ಗೆ ಸಮರ್ಜಿತ್ ಎಂಟ್ರಿ ಕೊಟ್ಟ ಇಂದ್ರಜಿತ್ ಪುತ್ರ!

ಸಮರ್ಜಿತ್ ಲಂಕೇಶ್  ಗೌರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ. ದೊಡ್ಡ ಸ್ಟಾರ್ ಆಗಬೇಕು ಎಂದು ಕನಸನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಗೌರಿ ಸಿನಿಮಾದ ನಟನೆಗಾಗಿ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಬಂದಿದೆ.

ಮರ್ಜಿತ್ ಲಂಕೇಶ್  ಗೌರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ. ದೊಡ್ಡ ಸ್ಟಾರ್ ಆಗಬೇಕು ಎಂದು ಕನಸನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಗೌರಿ ಸಿನಿಮಾದ ನಟನೆಗಾಗಿ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಬಂದಿದೆ.

ಅವಾರ್ಡ್ ಪಡೆದ ಖುಷಿಯಲ್ಲಿರುವ ಹ್ಯಾಂಡಮ್ ಹಂಕ್ ಸಮರ್ಜಿತ್ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ಹಿಂದಿ ಸಿನಿಮಾರಂಗಮಾತ್ರವಲ್ಲ ಪಕ್ಕದ ತೆಲುಗು ಮತ್ತು ತಮಿಳಿನಿಂದನೂ ಆಫರ್‌ಗಳು ಬರುತ್ತಿದ್ದು ಪರಭಾಷೆಯ ಕಡೆ ಸಮರ್ಜಿತ್ ಗಮನ ಹರಿಸುತ್ತಿದ್ದಾರೆ. ಹೌದು, ಸಮರ್ಜಿತ್ ಹಿಂದಿ ಸಿನಿಮಾರಂಗಕ್ಕೆ ಕಾಲಿಡಲು ತಯಾರಾಗಿದ್ದಾರೆ. ಈಗಾಗಲೇ ಹಿಂದಿಯ ದೊಡ್ಡ ಪ್ರೊಡಕ್ಷನ್ ಹೌಸ್ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಮರ್ಜಿತ್ ಜೊತೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

Ad
Ad
Nk Channel Final 21 09 2023