ಹಿಂದಿ ಕಿರುತೆರೆಯಲ್ಲಿ ಗಮನ ಸೆಳೆದ ವಿಕಾಸ್ ಸೇಥಿ ಅವರು (ಸೆ.8) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟನಿಗೆ ಫ್ಯಾನ್ಸ್, ಕಿರುತೆರೆ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ ಸೆ.8ರಂದು ಮಲಗಿದ್ದಲ್ಲೇ ಮೃತಪಟ್ಟಿರೋದಾಗಿ ವರದಿಯಾಗಿದೆ. ಮೃತ ದೇಹವನ್ನು ಮುಂಬೈನ ಖಾಸಗಿ ಆಸ್ಪತ್ರೆಯೊಂದಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ, ಕಹಿಂ ತೊ ಹೋಗಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿ ವಿಕಾಸ್ ಸೇಥಿ ಗಮನ ಸೆಳೆದಿದ್ದಾರೆ.
Ad