ಮುಂಬೈ: ನಟಿ ಹಿನಾ ಖಾನ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದು 3ನೇ ಹಂತದಲ್ಲಿದೆ. ಕೆಲವು ದಿನಗಳ ಹಿಂದೆ ಕೀಮೋಥೆರಪಿ ಮಾಡಿಸಿಕೊಂಡಿರುವ ಈ ನಟಿ ಸಾವಿನೊಂದಿಗೆ ಸೆಣೆಸುತ್ತಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು, ನೆಟಿಜನ್‌ಗಳನ್ನು ಮೆಚ್ಚಿ ಹೆಮ್ಮೆಪಡುವಂತೆ ಮಾಡಿದೆ. ಫ್ಯಾಷನ್ ಶೋನಲ್ಲಿ ಹಿನಾ ಪಾಲ್ಗೊಂಡಿದ್ದ ಫೋಟೋಗಳು ಮತ್ತು ವೀಡಿಯೊಗಳು ಈಗ ವೈರಲ್ ಆಗಿದ್ದು, ಇದರಲ್ಲಿ ನಟಿ ವಧುವಿನ ಕೆಂಪು ಲೆಹೆಂಗಾದಲ್ಲಿ ಚಿನ್ನದ ಆಭರಣಗಳೊಂದಿಗೆ ಕಣ್ಣುಕುಕ್ಕುವಂತೆ ಮೋಹಕವಾಗಿ ಕಾಣುತ್ತಿದ್ದಾರೆ.
ಇನ್ನು ಹೀನಾ ಅನಾಯಾಸವಾಗಿ ರಾಂಪ್ ಮೇಲೆ ನಡೆದಾಗ ಬೆಳದಿಂಗಳು ಚೆಲ್ಲಿದಂತೆ ನಗೆ ಬೀರುತ್ತಾರೆ. ಪ್ರೇಕ್ಷಕರು ಮತ್ತು ನೆಟಿಜನ್ಸ್ ಆಕೆಯ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಇನ್ನು ಹೀನಾಗೆ ಜೂನ್‌ನಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈ ರೋಗವನ್ನು ಜಯಿಸಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಆಕೆ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
Ad