Bengaluru 22°C
Ad

ಖ್ಯಾತ ಗಾಯಕ ಹಿಮೇಶ್ ರೇಶಮಿಯಾ ತಂದೆ ಅನಾರೋಗ್ಯದಿಂದ ನಿಧನ

ಖ್ಯಾತ ಗಾಯಕ, ಸಂಗೀತ ಸಂಯೋಜಕ ಹಿಮೇಶ್ ರೇಶಮಿಯಾ  ತಂದೆ ವಿಪಿನ್ ರೇಶಮಿಯಾ  ನಿಧನರಾಗಿದ್ದಾರೆ. 87 ವಯಸ್ಸಿನ ವಿಪಿನ್ ಹಿಮೇಶ್ ರೇಶಮಿಯಾ ಉಸಿರಾಟದ ಸಮಸ್ಯೆಗಳು ಹಾಗೂ ವಯೋಸಹಜ
ಖ್ಯಾತ ಗಾಯಕ, ಸಂಗೀತ ಸಂಯೋಜಕ ಹಿಮೇಶ್ ರೇಶಮಿಯಾ  ತಂದೆ ವಿಪಿನ್ ರೇಶಮಿಯಾ  ನಿಧನರಾಗಿದ್ದಾರೆ. 87 ವಯಸ್ಸಿನ ವಿಪಿನ್ ಹಿಮೇಶ್ ರೇಶಮಿಯಾ ಉಸಿರಾಟದ ಸಮಸ್ಯೆಗಳು ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸೆ.18ರಂದು ಮುಂಬೈನ ಕೋಕಿಲಾಬೆನ್ ಧಿರೂಭಾಯಿ ಅಂಬಾನಿ ಆಸ್ಪತ್ರಗೆ ದಾಖಲಾಗಿದ್ರು, ಅದೇ ದಿನ ರಾತ್ರಿ 8.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಬೈನ ಜುಹುವಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಬಾಲಿವುಡ್‌ನಲ್ಲಿ ಮೂರು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಹಿಮೇಶ್ ತಂದೆ ವಿಪಿನ್, ಒಂದು ಸಿನಿಮಾಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ರು. 1988ರಲ್ಲಿ `ಇನ್‌ಸಾಫ್ ಕಿ ಜಂಗ್’, 2014ರಲ್ಲಿ ‘ದಿ ಎಕ್ಸ್ಪೋಸ್’, 2016ರಲ್ಲಿ ‘ತೇರಾ ಸುರೂರ್’ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಕೀರ್ತಿ ವಿಪಿನ್ ರೇಶಮಿಯಾಗೆ ಸಲ್ಲುತ್ತೆ.

Ad
Ad
Nk Channel Final 21 09 2023