News Karnataka Kannada
Thursday, May 02 2024
ಮನರಂಜನೆ

ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ನಾಯಕಿ ಪ್ರಧಾನ ಸಿನಿಮಾ ‘ಕ್ರೂ’

ಮಾರ್ಚ್​ 29ರಂದು ಬಿಡುಗಡೆ ಆದ ನಾಯಕಿ ಪ್ರಧಾನ ಸಿನಿಮಾ ‘ಕ್ರೂ’ ಬಾಲಿವುಡ್​ನಲ್ಲಿ ಮ್ಯಾಜಿಕ್​ ಮಾಡಿದೆ ಎಂದರು ತಪ್ಪಾಗಲಾರದು.
Photo Credit : NewsKarnataka

ಮಾರ್ಚ್​ 29ರಂದು ಬಿಡುಗಡೆ ಆದ ನಾಯಕಿ ಪ್ರಧಾನ ಸಿನಿಮಾ ‘ಕ್ರೂ’ ಬಾಲಿವುಡ್​ನಲ್ಲಿ ಮ್ಯಾಜಿಕ್​ ಮಾಡಿದೆ ಎಂದರು ತಪ್ಪಾಗಲಾರದು.

ಮೊದಲ ದಿನ ‘ಕ್ರೂ’ ಸಿನಿಮಾ 10.28 ಕೋಟಿ ರೂಪಾಯಿ ಕಲೆಕ್ಷನ್​  ಮಾಡಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ ಮೊದಲ ದಿನವೇ 20.07 ಕೋಟಿ ರೂಪಾಯಿ ಆಗಿದೆ.

ಕರೀನಾ ಕಪೂರ್​ ಖಾನ್​, ಟಬು, ಕೃತಿ ಸನೋನ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.ಮಹಿಳೆಯರೇ ಪ್ರಮುಖ ಪಾತ್ರದಲ್ಲಿ ನಟಿಸಿದ ಸಿನಿಮಾಗೆ ಮೊದಲ ದಿನ ಈ ಪರಿ ಕಲೆಕ್ಷನ್​ ಆಗಿದ್ದು ಇದೇ ಮೊದಲು.

ನಾಯಕಿ ಪ್ರಧಾನ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡಿದ್ದು ಕಡಿಮೆ. ಅಪರೂಪಕ್ಕೆ ಎಂಬಂತೆ ಬಾಲಿವುಡ್​ನ ‘ಕ್ರೂ’ ಸಿನಿಮಾ  . ಈ ಸಿನಿಮಾಗೆ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ‘ಕ್ರೂ’ ಸಿನಿಮಾ ದಾಖಲೆ ಬರೆದಿದೆ.

ಎರಡನೇ ದಿನವಾದ ಶನಿವಾರ (ಮಾರ್ಚ್​ 30) ‘ಕ್ರೂ’ ಸಿನಿಮಾದ ಬಿಸ್ನೆಸ್​ ಏರಿಕೆ ಕಂಡಿದೆ. 2ನೇ ದಿನ ಈ ಸಿನಿಮಾಗೆ 10.87 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಇದು ಸಿನಿಮಾ ತಂಡದ ಖುಷಿಗೆ ಕಾರಣ ಆಗಿದೆ. ಭಾನುವಾರ (ಮಾರ್ಚ್​ 31) ಕೂಡ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಕಾಮಿಡಿ ಕಥಾಹಂದರವನ್ನು ‘ಕ್ರೂ’ ಸಿನಿಮಾ ಹೊಂದಿದೆ. ಗಗನ ಸಖಿಯರ ಪಾತ್ರದಲ್ಲಿ ಕೃತಿ ಸನೋನ್​, ಟಬು ಹಾಗೂ ಕರೀನಾ ಕಪೂರ್​ ಅವರು ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು