ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಹರಿಹರ ವೀರಮಲ್ಲು’ ಸಿನಿಮಾ ಸಖತ್ ಸುದ್ದಿಯಲ್ಲಿದೆ. ಸದ್ಯ ಚಿತ್ರದ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಭೀಮ್ಲಾ ನಾಯಕ್’ ಹಾಗೂ ‘ಬ್ರೋ’ ಸಿನಿಮಾದ ಬಳಿಕ ‘ಹರಿಹರ ವೀರಮಲ್ಲು’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅಂದಹಾಗೆ, 17ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಐತಿಹಾಸಿಕ ಕಾಲ್ಪನಿಕ ಕಥೆಯನ್ನು ‘ಹರಿಹರ ವೀರಮಲ್ಲು’ ಒಳಗೊಂಡಿದೆ.
ಸದ್ಯ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, 2025ರ ಮಾರ್ಚ್ 28ಕ್ಕೆ ವಿಶ್ವದಾದ್ಯಂತ ದರ್ಶನ ಕೊಡಲಿದೆ. ಈ ಸುದ್ದಿ ಕೇಳಿ ಪವನ್ ಕಲ್ಯಾಣ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಹರಿಹರ ವೀರಮಲ್ಲು’ ಭಾಗ-1 ಸಿನಿಮಾವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡಿದ್ದಾರೆ. ಇನ್ನೂ ‘ಬಾಹುಬಲಿ’ ಹಾಗೂ ‘ಆರ್‌ಆರ್‌ಆರ್’ ಸಿನಿಮಾಗಳಿಗೆ ಸಂಗೀತ ನೀಡಿದ ಎಂ.ಎಂ ಕೀರವಾಣಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.
Ad